ಪ್ರಮುಖ ಸುದ್ದಿಮನರಂಜನೆ

ರಾಜ್ಯಸಭಾ ಸದಸ್ಯೆ ಜಯಾಬಚ್ಚನ್ ಹೇಳಿಕೆಗೆ ನಟಿ ಕಂಗನಾ ರಾಣಾವತ್ ವಾಗ್ದಾಳಿ


ದೇಶ(ನವದೆಹಲಿ)ಸೆ.16:- ಸಂಸತ್ತಿನಲ್ಲಿ ನಟಿ ರಾಜ್ಯಸಭಾ ಸದಸ್ಯೆ ಜಯಾಬಚ್ಚನ್ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆ ವಿರುದ್ಧ ಬಾಲಿವುಡ್ ನಟಿ ಕಂಗನಾ ರಾಣಾವತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಒಂದು ವೇಳೆ ಜಯ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ಅವರನ್ನು ಎಳೆದಾಡಿ, ಹಲ್ಲೆ ಮಾಡಿ ಕಿರುಕುಳ ನೀಡಿದ್ದರೆ ಇದೇ ರೀತಿ ಹೇಳುತ್ತಿದ್ರಾ? ಅಭಿಷೇಕ್ ಬಚ್ಚನ್ ನಿರಂತರ ಕಿರುಕುಳ ಅನುಭವಿಸಿ ಒಂದು ದಿನ ನೇಣು ಹಾಕಿಕೊಂಡರೆ ಇದೇ ರೀತಿ ಹೇಳುತ್ತಿದ್ರಾ ಎಂದು ಕಂಗನಾ ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಮನರಂಜನಾ ವಲಯದಲ್ಲಿಯೇ ಇದ್ದು, ಸಿನಿಮಾ ಕ್ಷೇತ್ರವನ್ನು ಅಪಖ್ಯಾತಿಗೊಳಿಸುತ್ತಿರುವವರ ವಿರುದ್ಧ ರಾಜ್ಯಸಭಾ ಸದಸ್ಯೆ ಆಗಿರುವ ನಟಿ ಜಯ ಬಚ್ಚನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ನಟಿ ಕಂಗನಾ ರಾಣಾವತ್ ಬಾಲಿವುಡ್ ನ್ನು ಚರಂಡಿಗೆ ಹೋಲಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: