ಪ್ರಮುಖ ಸುದ್ದಿಮನರಂಜನೆ

ಕಟ್ಟಡ ಹಾನಿ : ಬಿಎಂಸಿಯಿಂದ 2ಕೋಟಿ ಪರಿಹಾರ ಕೇಳಿದ ನಟಿ ಕಂಗನಾ ರಾಣಾವತ್

ದೇಶ( ಮುಂಬೈ)ಸೆ.16:- ಬೃಹತ್ ಮುಂಬೈ ಮಹಾನಗರ ಪಾಲಿಕೆ ತಮ್ಮ ಮುಂಬೈ ಬಂಗಲೆ ತೆರವು ಕಾರ್ಯಾಚರಣೆ ನಡೆಸಿರುವುದನ್ನು “ಅಕ್ರಮ” ಎಂದಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್ 2 ಕೋಟಿ ರೂ.ಪರಿಹಾರ ನೀಡಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಬಿಎಂಸಿ ಸೆಪ್ಟೆಂಬರ್ 9ರಂದು ಕಂಗನಾ ಅವರ ಮುಂಬೈನ ಬಾಂದ್ರಾದ ಪಾಲಿ ಹಿಲ್ ಬಂಗಲೆ ಅಕ್ರಮ ಕಟ್ಟಡ ಎಂದು ಗುರುತಿಸಿ ಅದನ್ನು ನಾಶ ಮಾಡಿತ್ತು. ಬಂಗಲೆಯ ಶೇ. 40ರಷ್ಟು ಭಾಗವನ್ನು ಬಿಎಂಸಿ ನಾಶ ಮಾಡಿದೆ. ಚಂಡೇಲಿಯರ್ಸ್, ಸೋಫಾ, ಅಪರೂಪದ ಆರ್ಟ್‌ಗಳನ್ನು ನಾಶಪಡಿಸಲಾಗಿದೆ ಎಂದು ನಟಿ ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ನೋಟಿಸ್ ಕಳುಹಿಸಿ 24 ಗಂಟೆಯಲ್ಲೇ ತೆರವು ಕಾರ್ಯಾಚರಣೆ ಆರಂಭಿಸಿದ ಬಗ್ಗೆಯೂ ನಟಿ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲದೇ ಬಿಎಂಸಿಯಿಂದ 2 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.
ಅರ್ಜಿ ತಿದ್ದುಪಡಿಗೆ ಸೆ.14 ರ ತನಕ ಹೈಕೋರ್ಟ್ ಸಮಯ ಕೊಟ್ಟಿದ್ದು, ಸೆ.22ಕ್ಕೆ ಅಂತಿಮ ವಿಚಾರಣೆ ನಡೆಯಲಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: