ಕ್ರೀಡೆಪ್ರಮುಖ ಸುದ್ದಿ

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸದಾಶಿವ ರಾವ್‌ಜೀ ಪಾಟೀಲ ನಿಧನ

ದೇಶ(ಮುಂಬೈ)ಸೆ.16:- ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸದಾಶಿವ ರಾವ್‌ಜೀ ಪಾಟೀಲ ನಿಧನರಾಗಿದ್ದಾರೆ.
ಅವರಿಗೆ 86ವರ್ಷ ವಯಸ್ಸಾಗಿತ್ತು. ದೇಶದ ಪರ ಒಂದು ಟೆಸ್ಟ್‌ ಪಂದ್ಯದಲ್ಲಿ ಅವರು ಆಡಿದ್ದರು.
ಮಹಾರಾಷ್ಟ್ರದ ಕೊಲ್ಲಾಪುರದ ನಿವಾಸದಲ್ಲಿ ಮಂಗಳವಾರ ನಸುಕಿನ ಜಾವ ನಿದ್ರೆಯಲ್ಲಿದ್ದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ’ ಎಂದು ಕೊಲ್ಲಾಪುರದ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಮಾಜಿ ಸಿಬ್ಬಂದಿ ರಮೇಶ್‌ ಕದಮ್‌ ಮಾಹಿತಿ ನೀಡಿದ್ದಾರೆ.
1952-64ರ ಅವಧಿಯಲ್ಲಿ ಸದಾಶಿವ ಅವರು ಮಹಾರಾಷ್ಟ್ರ ಪರ 36 ಪ್ರಥಮದರ್ಜೆ ಪಂದ್ಯಗಳನ್ನು ಆಡಿದ್ದರು. 886 ರನ್‌ ಹಾಗೂ 83 ವಿಕೆಟ್‌ ಗಳಿಸಿದ್ದರು. ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡದ ನಾಯಕತ್ವವನ್ನೂ ವಹಿಸಿದ್ದರು.

ಸದಾಶಿವ ಅವರ ನಿಧನಕ್ಕೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂತಾಪ ಸೂಚಿಸಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: