ಮೈಸೂರು

ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನವನ್ನಾಧರಿತ ‘ಮಹಾನಾಯಕ’ ಧಾರಾವಾಹಿಯ ಪೋಸ್ಟರ್ ಗೆ ಪುಷ್ಪ ನಮನ

ಮೈಸೂರು,ಸೆ.17:-ತಿ.ನರಸೀಪುರ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ ಹಾಗೂ ಕ್ರಿಕೆಟ್ ತಂಡದ ವತಿಯಿಂದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನವನ್ನಾಧರಿತ ‘ಮಹಾನಾಯಕ’ ಧಾರಾವಾಹಿಯ ಪೋಸ್ಟರ್ ಗೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಸಿ. ಉಮಾಮಹದೇವ ಮಾತನಾಡಿ, ಸ್ವಾಭಿಮಾನದ ಸಂಕೇತವಾಗಿ ಮಹಾನಾಯಕ ಧಾರವಾಹಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಹಾನಾಯಕ ಧಾರವಾಹಿ ಫ್ಲೆಕ್ಸ್ ಅನ್ನು ಹಳ್ಳಿ ಹಳ್ಳಿಯಲ್ಲಿ ಅನಾವರಣ ಮಾಡುತ್ತಿದ್ದಾರೆ. ಅದು ಸಂತೋಷದ ವಿಚಾರ. ಆದರೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅನ್ವಯವಾಗುವ ಸಂವಿಧಾನ ನೀಡಿ, ಮಹಿಳೆಯರು ಹಾಗೂ ಶೋಷಣೆಗೆ ಒಳಗಾದವರಿಗೆ ಜೀವನ ಕೊಟ್ಟ ಮಹಾನಾಯಕ ಅಂಬೇಡ್ಕರ್ ಅವರನ್ನ ದಲಿತರು ಮಾತ್ರವಲ್ಲದೆ, ಎಲ್ಲಾ ವರ್ಗದ ಜನರು ಗೌರವಿಸಿ ಪೂಜಿಸಬೇಕು. ಪ್ರಪಂಚವೇ ಅಂಬೇಡ್ಕರ್ ಅವರನ್ನು ಜ್ಞಾನದ ಸಂಕೇತವಾಗಿ ನೋಡುತ್ತಿರುವಾಗ ಭಾರತದಲ್ಲಿ ಅವರನ್ನು ಜಾತಿಗೆ ಸೀಮಿತವಾಗಿ ನೋಡುತ್ತಿರುವುದು ಸರಿಯಲ್ಲ. ಆಡಳಿತ ನಡೆಸುತ್ತಿರುವ ಸರ್ಕಾರಗಳು ಅಂಬೇಡ್ಕರ್ ಅವರನ್ನು ಪೂಜಿಸುತ್ತೇವೆ ಎಂದು ಅವರನ್ನು ಒಂದು ಮೂರ್ತಿಯನ್ನಾಗಿ ಮಾಡಿ ಅವರ ಆದರ್ಶಗಳನ್ನು ಕೊಲ್ಲುತ್ತಿದ್ದಾರೆ. ದೃಶ್ಯ ವಾಹಿನಿಯೊಂದು ಅಂಬೇಡ್ಕರ್ ಜೀವನ ಚರಿತ್ರೆಯನ್ನು ಮನೆ ಮನೆಗೆ ತಲುಪಿಸುತ್ತಿರುವುದರಿಂದ ಸಮಸ್ತ ನಾಗರೀಕರು ವೀಕ್ಷಣೆ ಮಾಡಿ ಅವರನ್ನು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ನಂತರ ಕ್ರಿಕೆಟ್ ತಂಡದ ಸದಸ್ಯರು ಗ್ರಾಮದ ಜನತೆಗೆ ಊಟ ಏರ್ಪಡಿಸಿ ಮೆಚ್ಚುಗೆಗೆ ಕಾರಣರಾದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗರಾಜು, ಮಾಜಿ ಉಪಾಧ್ಯಕ್ಷ ಹೊನ್ನಯ್ಯ, ಅಂಬೇಡ್ಕರ್ ಯುವಕರ ಸಂಘ ಮತ್ತು ಕ್ರಿಕೆಟ್ ತಂಡದ ಸದಸ್ಯರಾದ ನವೀನ, ಪ್ರದೀಪ, ಸಿದ್ದರಾಜು ಮುಖಂಡರಾದ ಸೋಮಣ್ಣ, ಲಾಯರ್ ಬಸವಣ್ಣ, ರೇವಣ್ಣ, ಬುಲ್ಲಯ್ಯ, ಮಾದೇಶ, ನಿಂಗರಾಜು ಮೌರ್ಯ ಅರಸು, ಸಿದ್ದಾರ್ಥ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಸೆ.19ರಂದು ಸಮಾನ ಮನಸ್ಕರ ಸಭೆ
ಸಂವಿಧಾನ ಶಿಲ್ಪಿ “ಡಾ.ಬಿ.ಆರ್. ಅಂಬೇಡ್ಕರ್ ಜಾತಿ ಸಂಕೋಲೆಯಿಂದಾಚೆ”ಗೆ ಒಂದು ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆಸಲು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೆ.19 ರಂದು ಬೆಳಿಗ್ಗೆ 11 ಗಂಟೆಗೆ ಪೂರ್ವಭಾವಿ ಸಭೆ ಕರೆಯಲಾಗಿದ್ದು, ತಾಲೂಕಿನ ಎಲ್ಲಾ ರೈತ ಸಂಘಟನೆಗಳು, ಎಲ್ಲಾ ಸಮುದಾಯಗಳ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಹಾಗೂ ಇತರೆ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಆದ್ದರಿಂದ ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸಹಕಾರ ನೀಡಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಉಮಾಮಹದೇವ ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: