ಕರ್ನಾಟಕಪ್ರಮುಖ ಸುದ್ದಿ

ಉಡುಪಿ ಡಿಸಿ ಮೇಲಿನ ಹಲ್ಲೆ ಯತ್ನ ಖಂಡಿಸಿದ ಕಾಗೋಡು ತಿಮ್ಮಪ್ಪ

ಉಡುಪಿ ಜಿಲ್ಲಾಧಿಕಾರಿ ಮೇಲೆ ಮರಳು ಮಾಫಿಯಾದವರಿಂದ ಹಲ್ಲೆ ಯತ್ನ ಘಟನೆಯನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಖಂಡಿಸಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಸಚಿವರು ಸರ್ಕಾರ ದುಷ್ಕರ್ಮಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದರು.  ಕೋಲಾರಕ್ಕೆ ಬರವೀಕ್ಷಣೆಗೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮರಳು ಮಾಫಿಯಾದವರು ಜಿಲ್ಲಾಧಿಕಾರಿಗಳ ಮೇಲೆ ಹಲ್ಲೆ ಮಾಡಲು ಯತ್ನಿಸಿರುವುದಕ್ಕೆ ಖಂಡನೆ ವ್ಯಕ್ತಪಡಿಸುತ್ತಿದ್ದು, ಈ ರೀತಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದು ದುರ್ದೈವ ಎಂದರು. ಇನ್ನು ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು 4500 ಕೋಟಿ ಬೆಳೆ ಪರಿಹಾರ ಕೇಳಲಾಗಿದ್ದು, ಕೇಂದ್ರ ಸರ್ಕಾರದಿಂದ ಈಗ 1720 ಕೋಟಿ ಬಿಡುಗಡೆಯಾಗಿದೆ, ಬೆಳೆ ನಷ್ಟ ಹೊಂದಿರುವಂತಹ ಸುಮಾರು 15 ಲಕ್ಷ ರೈತರ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುವುದು ಎಂದರು. ಅಲ್ಲದೆ ಮಾಧ್ಯಮಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮಾಧ್ಯಮಗಳನ್ನ ನಿಯಂತ್ರಿಸುವುದು ಕಷ್ಟಸಾದ್ಯ. ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ ಎಂಬುದು ಇದೆ, ಆದರೆ ಯಾರೊಬ್ಬರೂ ವಾಕ್ ಸ್ವಾತಂತ್ರ್ಯದ ಹಕ್ಕಿನ ಮಿತಿಯನ್ನು ಮೀರಬಾರದು ಎಂದು ತಿಳಿಸಿದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: