ಮೈಸೂರು

ಅಧಿಕಾರ ಅನುಭವಿಸಿ ಐಶಾರಾಮಿ ಜೀವನ ನಡೆಸಿದ ಕೃಷ್ಣ ಖಳನಾಯಕರಾಗಿದ್ದಾರೆ : ಉಗ್ರಪ್ಪ ಕಿಡಿ

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ನಡೆಯುತ್ತಿದ್ದು, ನಂಜಗೂಡಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಸ್.ಎಂ.ಕೃಷ್ಣರವರು ಕಾಂಗ್ರೆಸ್ ಪಕ್ಷದ ಬಗ್ಗೆ ಇಲ್ಲದ ಸಲ್ಲದ ಹೇಳಿಕೆ ನೀಡಿರುವುದು ಖಂಡನೀಯ ಎಂದು ಉಗ್ರಪ್ಪ ಎಸ್.ಎಂ.ಕೃಷ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1999 ರಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟು 132 ಸ್ಥಾನಗಳನ್ನು ವಿಧಾನ ಸಭೆಗೆ ಆಯ್ಕೆ ಮಾಡಿ ಎಸ್.ಎಂ.ಕೃಷ್ಣ ರವರು ಮುಖ್ಯಮಂತ್ರಿಗಳಾಗಿ ನೇಮಕಗೊಂಡರು.ಕಾಂಗ್ರೆಸ್ ಹೈಕಮಾಂಡ್ ಎಸ್.ಎಂ.ಕೃಷ್ಣ ರವರ ಮೇಲೆ ಸಂಪೂರ್ಣ ವಿಶ್ವಾಸ ವಿಟ್ಟು ಅವಕಾಶ ಕಲ್ಪಿಸಿತ್ತು. ಒಬ್ಬ ಮುತ್ಸದ್ಧಿ ರಾಜಕಾರಣಿಯಾಗಿ ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಪಕ್ಷ ಅವರ ಮೇಲೆ ಇಟ್ಟಿದ ನಂಬಿಕೆಯನ್ನು ಉಳಿಸಿಕೊಂಡು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರವನ್ನು ತರುವ ಹೊಣೆಗಾರಿಕೆಯನ್ನು ನಿರ್ವಹಿಸಬೇಕಿತ್ತು. ಕಾಂಗ್ರೆಸ್ ಪಕ್ಷದಿಂದ ತಮ್ಮ ಎಲ್ಲಾ ಅಧಿಕಾರ, ಐಶಾರಮಿ ಜೀವನ ನಡೆಸಿದ ಇವರು ಕರ್ನಾಟಕ ರಾಜಕಾರಣದಲ್ಲಿ ಜನತೆಯ ದೃಷ್ಟಿಯಿಂದ ಖಳನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದರು.

ಇವರು ಬಿಜೆಪಿ ಪಕ್ಷ ಸೇರಿದ ಕೂಡಲೇ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ರಾಜ್ಯದಲ್ಲಿ ಎಂದು ಕಂಡರಿಯದ ಹಸಿವು ಮುಕ್ತ ಕಾರ್ಯಕ್ರಮ ಹಾಗೂ ಬಡವರೆಂಬ ಕಾರಣಕ್ಕೆ ಶಿಕ್ಷಣದಿಂದ ದೂರ ಉಳಿಯಬಾರದುಹಾಗೂ ಬಡಮಕ್ಕಳಿಗೆ ವಿದ್ಯಾಸಿರಿ ಯೋಜನೆ ಜಾರಿಯಾಗಿದೆ. ಅದು ಕೃಷ್ಣ ಅವರಿಗೆ ತಿಳಿದಿಲ್ಲವೇನೂ, ಕೃಷ್ಣರವರು ಬಿಜೆಪಿ ನಾಯಕರನ್ನು ಓಲೈಸಲು ಸುಳ್ಳು ಮಾತನಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಕೊಡುಗೆ ಕಡಿಮೆ. ಮೋದಿ ಎಸ್.ಬಿ.ಎಂ ಅನ್ನು ಎಸ್.ಬಿ. ಗೆ ಸೇರಿಸಿರುವುದು ಏಕೆಂದರೇ ಸಾರ್ವಜನಿಕರು ಬ್ಯಾಂಕಿನ ವ್ಯವಹಾರ ಮಾಡದಂತೆ ಸಂಚು ರೂಪಿಸಿದ್ದಾರೆ. ಮೋದಿ ಜನ್ ಧನ್ ಮೂಲಕ ಖಾತೆಗೆ ಹಣ ಹಾಕುತ್ತೇನೆ ಎಂದು ಹೇಳಿ ಜನರಿಗೆ ಮೋಸ ಮಾಡಿದ್ದಾರೆ.ರಾಜ್ಯ ಕಂಡ ಕೆಟ್ಟ, ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಎಚ್.ಎಂ.ರೇವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ( ಎಲ್.ಜಿ-ಎಸ್.ಎಚ್)

Leave a Reply

comments

Related Articles

error: