ಕರ್ನಾಟಕಪ್ರಮುಖ ಸುದ್ದಿ

ರಾಜ್ಯದ ಬಿಜೆಪಿ ಸರ್ಕಾರ ಒಂದು ಅಟೆನ್ಶನ್ ಡೈವರ್ಷನ್ ಸರ್ಕಾರ: ಯು.ಟಿ.ಖಾದರ್ ಕಿಡಿ

ಮಂಗಳೂರು,ಸೆ.16-ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಯು.ಟಿ.ಖಾದರ್ `ರಾಜ್ಯದ ಬಿಜೆಪಿ ಸರ್ಕಾರ ಒಂದು ಅಟೆನ್ಶನ್ ಡೈವರ್ಷನ್ ಸರ್ಕಾರ’ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಖಾದರ್ ಅವರು, ರಾಜ್ಯದಲ್ಲಿ ಆಡಳಿತ ನಡೆಸ್ತಿರೋದು ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಅಟೆನ್ಶನ್ ಡೈವರ್ಷನ್ ಸರ್ಕಾರ ಎಂದಿದ್ದಾರೆ.

ಕೊರೋನಾ ಹಾವಳಿ, ಪ್ರವಾಹ ಸಂಕಷ್ಟ, ರೈತ ವಿರೋಧಿ ಎಪಿಎಎಂಸಿ ಜನಕಾಯ್ದೆ ತಿದ್ದುಪಡಿ, ಶ್ರಮಿಕ ವಿರೋಧಿ ಕಾರ್ಮಿಕ ಕಾಯ್ದೆ ತಿದ್ದುಪಡಿಗಳ ಬಗ್ಗೆ ಚರ್ಚಿಸೋ ಬದಲು, ಡ್ರಗ್ಸ್ ಪ್ರಕರಣವನ್ನು‌ ಸಮರ್ಪಕವಾಗಿ ತನಿಖೆ ನಡೆಸಿ ಮಾಫಿಯಾ ಮಟ್ಟ ಹಾಕಲು ನಾರ್ಕೋಟಿಕ್ ಸೆಲ್ ಹಾಗೂ ಕಾನೂನು ಇನ್ನಷ್ಠು ಬಲಿಷ್ಠಗೊಳಿಸೋ ಬದಲು ರಾಜಕೀಯ ಲಾಭಕ್ಕಾಗಿ ಹಿಟ್ ಅಂಡ್ ರನ್ ಕೇಸ್ ರೀತಿ ವರ್ತಿಸುತ್ತಿದೆ. ತನ್ನ ವೈಫಲ್ಯಗಳನ್ನ ಮುಚ್ಚಿಡಲು ವಿಪಕ್ಷ ಮುಖಂಡರುಗಳ ಮೇಲೆ ಗೂಬೆ ಕೂರಿಸಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಈ ಮೂಲಕ ಅಧಿವೇಶನ ಆರಂಭವಾಗುತ್ತಿರುವ ಸಂದರ್ಭದಲ್ಲಿ ಜನರ ಗಮನವನ್ನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ ಎಂದಿದ್ದಾರೆ.

ವಿಧಾನಸಭೆಯ ಮುಂಗಾರು ಅಧಿವೇಶನ ಸೆಪ್ಟೆಂಬರ್ 21ರಿಂದ ಆರಂಭವಾಗಲಿದೆ. ಕೋವಿಡ್ ಪರಿಸ್ಥಿತಿ, ಪ್ರವಾಹ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ವಿಪಕ್ಷಗಳು ಸಿದ್ಧವಾಗಿವೆ. (ಎಂ.ಎನ್)

Leave a Reply

comments

Related Articles

error: