ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಬಂಡೀಪುರ, ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ ನಿರ್ದೇಶಕ ರಾಜಮೌಳಿ ದಂಪತಿ

ಗುಂಡ್ಲುಪೇಟೆ,ಸೆ.16- ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಪತ್ನಿಯೊಂದಿಗೆ ತಾಲ್ಲೂಕಿನ ಬಂಡೀಪುರ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಇಂದು ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು.

ನಿನ್ನೆಯೇ ಪತ್ನಿ ರಮಾ ಅವರೊಂದಿಗೆ ತಾಲೂಕಿಗೆ ಆಗಮಿಸಿದ್ದ ರಾಜಮೌಳಿ ಅವರು ಕಣಿಯನಪುರದಲ್ಲಿರುವ ಸೆರಾಯ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಿಗ್ಗೆ ಬಂಡೀಪುರದಲ್ಲಿ ಸಫಾರಿಗೆ ತೆರಳಿದ್ದರು. ಬಳಿಕ ಗೋಪಾಲಸ್ವಾಮಿ ಬೆಟ್ಟಕ್ಕೆ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಅರ್ಚಕರು ದಂಪತಿಗೆ ಇವರಿಗೆ ಶಾಲು ಹೊದೆಸಿ ಸನ್ಮಾನಿಸಿದರು.

ಗೋಪಾಲಸ್ವಾಮಿ ದೇವಾಲಯದ ಹೊರ ಆವರಣದಲ್ಲಿ ಸುತ್ತಾಡಿದ ಅವರು, ರಮಣೀಯ ಪ್ರಕೃತಿಯನ್ನು ವೀಕ್ಷಿಸಿದರು. ವಲಯ ಅರಣ್ಯಾಧಿಕಾರಿ ನವೀನ್‌ ಕುಮಾರ್‌ ಅವರು ದಂಪತಿಯ ಜೊತೆಗಿದ್ದು, ಮಾರ್ಗದರ್ಶನ ಮಾಡಿದರು.

ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತ‌ಪಡಿಸಿದ ರಾಜಮೌಳಿ ಅವರು, ಅರಣ್ಯ ಇಲಾಖೆಯು ತುಂಬಾ ಚೆನ್ನಾಗಿ ನಿರ್ವಹಣೆ ಮಾಡಿದೆ ಎಂದು ಹೇಳಿದರು. (ಎಂ.ಎನ್)

 

Leave a Reply

comments

Related Articles

error: