ಮೈಸೂರು

ಬ್ರಾಹ್ಮಣರಿಗೆ ಜಾತಿ ಪ್ರಮಾಣಪತ್ರ ನೀಡಲು ಶೀಘ್ರ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಮೈಸೂರು,ಸೆ.16:- ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಜಾತಿ ಪ್ರಮಾಣಪತ್ರ ನೀಡಲು ಕರ್ನಾಟಕ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರಿ ಆದೇಶ ಹೊರಡಿಸಿದ್ದು ಅದರ ಅನ್ವಯಂದಂತೆ ಮೈಸೂರು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಹ್ಮಣರಿಗೆ ಸಹಾಯವಾಗುವಂತೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅವರಿಗೆ ಶೀಘ್ರವಾಗಿ ಕ್ರಮಕೈಗೊಳ್ಳಲು ಸೂಚಿಸಬೇಕೆಂದು ಇಂದು ಮೈಸೂರು ಜಿಲ್ಲಾಧಿಕಾರಿಗಳಾದ ಬಿ. ಶರತ್ ಅವರಿಗೆ ಮೈಸೂರು ನಗರ ಬ್ರಾಹ್ಮಣ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಇದೇ ಸಂಧರ್ಭದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್ ಮಾತನಾಡಿ ಮೈಸೂರಿನಲ್ಲಿ ಸಹಸ್ರಾರು ಬ್ರಾಹ್ಮಣ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿದೆ ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರಿ ಸವಲತ್ತುಗಳಿಲ್ಲದ ಸಂದರ್ಭದಲ್ಲಿ ದಶಕದ ಬ್ರಾಹ್ಮಣ ಸಂಘದ ಹೋರಾಟ ರಾಜ್ಯದಲ್ಲಿ ಹತ್ತಾರು ಬ್ರಾಹ್ಮಣ ಸಮಾವೇಶಗಳನ್ನು ಮಾಡಿ ರಾಜ್ಯಸರ್ಕಾರ ಗಮನ ಸೆಳೆಯಿತು. ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಸೇರಿದಂತೆ ಶಂಕರ ಜಯಂತಿ ಸರ್ಕಾರದಿಂದ ಜಾರಿಗೆ ಬಂದವು ಮತ್ತು ಶೈಕ್ಷಣಿಕ ಸಹಾಯ, ಉದ್ಯೋಗ, ವೈದ್ಯಕೀಯ ನೆರವಿಗಾಗಿ ಬಡಬ್ರಾಹ್ಮಣರು ಸರ್ಕಾರಿ ಸವಲತ್ತು ಪಡೆಯಲು ಬ್ರಾಹ್ಮಣ ಜಾತಿಪ್ರಮಾಣ ಪತ್ರ ನೀಡಬೇಕು ಇದನ್ನು ರಾಜ್ಯಸರ್ಕಾರ ಬಡಬ್ರಾಹ್ಮಣರಿಗೆ ನೀಡಲು ಜಿಲ್ಲಾಧಿಕಾರಿಗಳಿಗೆ ಸರ್ಕಾರಿ ಆದೇಶ ಹೊರಡಿಸಿದೆ. ಮೈಸೂರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ತಾಲೂಕು ಕಚೇರಿಗಳಲ್ಲಿ ಬ್ರಾಹ್ಮಣರು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಭರ್ತಿ ಮಾಡಿ ಪಡೆಯಬಹುದಾಗಿದೆ. ಹಾಗಾಗಿ ತಹಶೀಲ್ದಾರ್ ಕಛೇರಿಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಂಡು ವಿತರಿಸಲು ಸೂಚಿಸಬೇಕೆಂದು ಜಿಲ್ಲಾಧಿಕಾರಿಗಳಾದ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಈ ಸಂದರ್ಭ ಅಪರ ಡಿಸಿ ಮಂಜುನಾಥ್, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಉಪಾಧ್ಯಕ್ಷ ಅಜಯ್ ಶಾಸ್ತ್ರಿ, ಗಣೇಶ್ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: