ಮೈಸೂರು

ಪ್ರಧಾನಿ ಮೋದಿ ಜನ್ಮದಿನಾಚರಣೆ ಪ್ರಯುಕ್ತ ಪೇಪರ್ ಬ್ಯಾಗ್ ವಿತರಿಸಿ ಅರಿವು

ಮೈಸೂರು,ಸೆ.16:- ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ 70 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ವತಿಯಿಂದ ಎಫ್ ಟಿ.ಎಸ್ ವೃತ್ತದಲ್ಲಿ ” ಪ್ಲ್ಯಾಸ್ಟಿಕ್ ಮುಕ್ತ ಮೈಸೂರು” ಪ್ಲಾಸ್ಟಿಕ್ ಬ್ಯಾಗ್ ಬಿಡಿ ಪೇಪರ್ ಬ್ಯಾಗ್ ಬಳಸಿ ಎಂದು ಉಚಿತವಾಗಿ ಸಾರ್ವಜನಿಕರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ 500 ಕ್ಕೂ ಹೆಚ್ಚು ಪೇಪರ್ ಬ್ಯಾಗ್ ನೀಡಿ ಅರಿವು ಮೂಡಿಸಲಾಯಿತು.
ಈ ಕಾರ್ಯಕ್ರದಲ್ಲಿ ಬಿಜೆಪಿ ಎನ್.ಆರ್ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಡಿ.ಲೋಹಿತ್,ಮೈಸೂರು ನಗರ ಯುವಮೋರ್ಚಾ ಅಧ್ಯಕ್ಷರಾದ ಕಿರಣ್.ಎಂ.ಗೌಡ,ಎನ್.ಆರ್.ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸ್ವಾಮಿ.ಗೌಡ , ನಗರ ಯುವ ಮೋರ್ಚಾ ಉಪಾಧ್ಯಕ್ಷರಾದ ಕಾರ್ತಿಕ್ ಕುಮಾರ್, ನಗರ ಕಾರ್ಯಕಾರಣಿ ಸದಸ್ಯರಾದ ಪ್ರಮೋದ್,ಎನ್.ಆರ್ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ,ಮುಖಂಡರಾದ ವಿಜಯ್,ಚೇತನ್,ರಾಜು,ವಿಜಯ್ ಸಿಂಹ,ಮುಂತಾದವರು ಭಾಗಬಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: