
ಕ್ರೀಡೆಪ್ರಮುಖ ಸುದ್ದಿ
ಪಂಜಾಬ್ ಸಿಎಂ ಅಮರಿಂದರ್ ಸಿಂಗ್ , ಪೊಲೀಸರಿಗೆ ಸುರೇಶ್ ರೈನಾ ಧನ್ಯವಾದ ಅರ್ಪಣೆ
ದೇಶ(ನವದೆಹಲಿ)ಸೆ.17:- ಭಾರತ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಪಂಜಾಬ್ ಪೊಲೀಸರಿಗೆ ತಮ್ಮ ಸಂಬಂಧಿಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಧನ್ಯವಾದ ಅರ್ಪಿಸಿದ್ದಾರೆ.
ಕ್ರಿಕೆಟಿಗ ಸುರೇಶ್ ರೈನಾ ಈ ಪ್ರಕರಣ ಸಂಬಂಧ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಈ ಹಿಂದೆ ಪಂಜಾಬ್ ಮುಖ್ಯಮಂತ್ರಿಗಳು ಹಾಗೂ ಪಂಜಾಬ್ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು. ಈ ದುರ್ಘಟನೆಯಿಂದಾಗಿ ಎಡಗೈ ಬ್ಯಾಟ್ಸ್ಮನ್ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರ ನಡೆದಿದ್ದರು.
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸುರೇಶ್ ರೈನಾ ಸಂಬಂಧಿಕರ ಕೊಲೆ ಪ್ರಕರಣ ಸಂಬಂಧ ಅಂತಾರಾಜ್ಯದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದರು. (ಏಜೆನ್ಸೀಸ್,ಎಸ್.ಎಚ್)