ಮೈಸೂರು

ಪ್ರಾಧಿಕಾರದ ಸ್ವತ್ತನ್ನೇ ತನ್ನದೆಂದು ಮಾರಾಟಕ್ಕಿಟ್ಟ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಮೈಸೂರು,ಸೆ.17:- ಮೈಸೂರು ನಗರ ಟಿ.ಕೆ.ಬಡಾವಣೆಯ ನಿ.ಸಂ 719/ಎರಲ್ಲಿ 40* 50 ಅಡಿ ಒಟ್ಟು 2200 ಚ.ಅಡಿ ಅಳತೆಯ ನಿವೇಶನವು ಮಾರಾಟಕ್ಕಿರುವುದಾಗಿ ಸೆ.13ರಂದು ಸ್ಥಳೀಯ ದಿನಪತ್ರಿಕೆಯಲ್ಲಿ ಹಾಹೀರಾತು ಪ್ರಕಟವಾಗಿರುವುದನ್ನು ನಗರಾಭಿವೃದ್ಧಿ ಪ್ರಾಧಿಕಾರವು ಗಮನಿಸಿದೆ.
ಈ ಸ್ವತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸ್ವಾಮ್ಯಕ್ಕೆ ಸೇರಿದ ಸ್ವತ್ತಾಗಿದ್ದು ಸಂಪೂರ್ಣ ಮಾಲೀಕತ್ವ ಮತ್ತು ಸ್ವಾಧೀನವು ಪ್ರಾಧಿಕಾರದ್ದಾಗಿರುತ್ತದೆ. ಈ ಸ್ವತ್ತಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲು ಪ್ರಯತ್ನಿಸಿರುವುದನ್ನು ಗಮನಿಸಲಾಗಿದ್ದು ಸಾರ್ವಜನಿಕರು ಮೋಸ ಹೋಗಬಾರದೆಂದು ಮುಡಾ ಎಚ್ಚರಿಸಿದೆ.
ದಿನಪತ್ರಿಕೆ ಜಾಹೀರಾತುಗಳಲ್ಲಿ ಕಾಣಿಸಿರುವ ಮೊಬೈಲ್ ಸಂಖ್ಯೆ 998674219 ಹೊಂದಿರುವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಕ್ರಮ ವಹಿಸಲಾಗುತ್ತಿದೆ. ಆದಾಗ್ಯೂ ಸಾರ್ವಜನಿಕರು ಈ ಸ್ವತ್ತನ್ನು ಖರೀದಿ ಪಡೆದಲ್ಲಿ ಉಂಟಾಗುವ ಯಾವುದೇ ನಷ್ಟಕ್ಕೆ ಪ್ರಾಧಿಕಾರವು ಜವಾವ್ದಾರವಾಗುವುದಿಲ್ಲ ಎಂದು ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: