ಮೈಸೂರು

ತೆಂಗಿನಕಾಯಿ ಕದಿಯುವ ಕೆಲಸದಲ್ಲಿ ತೊಡಗಿದ್ದ ಗ್ಯಾಂಗ್ ಬಂಧಿಸಿದ ಸಾಲಿಗ್ರಾಮ ಪೊಲೀಸರು

ಮೈಸೂರು,ಸೆ.17:- ಕಳೆದ ಹಲವು ವರ್ಷಗಳಿಂದ ಕೆ ಆರ್ ನಗರ ತಾಲೂಕಿನ ತೋಟಗಳಿಂದ ತೆಂಗಿನಕಾಯಿ ಕದಿಯುವ ಕೆಲಸದಲ್ಲಿ ತೊಡಗಿದ್ದ ಗ್ಯಾಂಗ್ ಅನ್ನು ಸಾಲಿಗ್ರಾಮ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನ ಆರೋಪದಡಿ ಪೊಲೀಸರು ಏಳು ಜನರನ್ನು ಬಂಧಿಸಿ ಐದು ಪ್ರಕರಣಗಳನ್ನು ಬಗೆಹರಿಸಿ, 60,000 ರೂ. ವಶಪಡಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಮೂವರ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಬಂಧಿತರನ್ನು ಮೈಸೂರು ಜಿಲ್ಲೆಯ ಕೆ ಆರ್ ನಗರದ ಪ್ರದೀಪ್, ಸೋಮಶೇಖರ್, ರಾಜು, ಪ್ರಜ್ವಲ್, ಮಹಾದೇವ್, ಯೋಗೇಶ್ ಮತ್ತು ಅಭಿ ಎಂದು ಗುರುತಿಸಲಾಗಿದೆ.
ಸುಗ್ಗಿಯ ನಂತರ ಸಂಗ್ರಹವಾಗಿದ್ದ ಮಿರ್ಲೆ ಗ್ರಾಮದ ನಾಗೇಶ್ ಮತ್ತು ವಿದ್ಯಾಶ್ರೀ, ಸಾಲಿಗ್ರಾಮದ ನರಸಿಂಹ ಗೌಡ, ಓಲ್ಡ್ ಮಿರ್ಲೆಯ ಗಣೇಶ್ ಮತ್ತು ಭೇರಿಯ ರಾಜಯ್ಯ ಅವರ ಒಡೆತನದ ಜಮೀನುಗಳಲ್ಲಿದ್ದ ತೆಂಗಿನಕಾಯಿಯನ್ನು ಕದ್ದೊಯ್ದಿದ್ದರು. ಕದ್ದ ಮಾಲುಗಳನ್ನು ಸಾಗಿಸಲು ಬಳಸುತ್ತಿದ್ದ ಎರಡು ಸರಕು ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಪಿಐ ಪಿ ಕೆ ರಾಜು, ಎಸ್ಐಗಳಾದ ಆರತಿ (ಸಾಲಿಗ್ರಾಮ) ಮತ್ತು ಚೇತನ್ (ಕೆ ಆರ್ ನಗರ), ಎಎಸ್ಐಗಳಾದ ಹೇಮಂತ್ ಕುಮಾರ್ ಮತ್ತು ಸೋಮಣ್ಣ ಮತ್ತು ಮತ್ತಿತರ ಸಿಬ್ಬಂದಿಗಳಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: