ಪ್ರಮುಖ ಸುದ್ದಿ

ದೇಶದಲ್ಲಿ 10ಲಕ್ಷ ದಾಟಿದ ಕೊರೋನಾ ಸಕ್ರಿಯ ಪ್ರಕರಣ

ದೇಶ(ನವದೆಹಲಿ)ಸೆ.17:- ಭಾರತದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 97,894 ಹೊಸ ಪ್ರಕರಣಗಳು ದಾಖಲಾಗಿವೆ. ಇದಕ್ಕೂ ಮುನ್ನ ಸೆಪ್ಟೆಂಬರ್ 11 ರಂದು ದಾಖಲೆಯ 97,570 ಸೋಂಕು ಪ್ರಕರಣಗಳು ದಾಖಲಾಗಿತ್ತು.
ಅದೇ ವೇಳೆ 24 ಗಂಟೆಗಳಲ್ಲಿ 1132 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸೆಪ್ಟೆಂಬರ್ 2 ರಿಂದ ದೇಶದಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ. ಒಳ್ಳೆಯ ಸುದ್ದಿ ಎಂದರೆ 24 ಗಂಟೆಗಳಲ್ಲಿ 82,961 ರೋಗಿಗಳು ಗುಣಮುಖರಾಗಿದ್ದಾರೆ.
ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ ಈಗ 51 ಲಕ್ಷ 18 ಸಾವಿರಕ್ಕೆ ತಲುಪಿದೆ. ಈ ಪೈಕಿ 83,198 ಜನರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷ 9 ಸಾವಿರಕ್ಕೆ ಏರಿದ್ದು, 40 ಲಕ್ಷ 25 ಸಾವಿರ ಜನರು ಗುಣಮುಖರಾಗಿದ್ದಾರೆ. ಆರೋಗ್ಯವಂತ ಜನರ ಸಂಖ್ಯೆ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: