ಮೈಸೂರು

ವಿಜಯ ವಿಠ್ಠಲ ಕಾಲೇಜಿನಲ್ಲಿ ಓಝೋನ್ ಪದರದ ಸಂರಕ್ಷಣೆ ಕುರಿತು ವಿಶೇಷ ಕಾರ್ಯಕ್ರಮ

ಮೈಸೂರು,ಸೆ.17:- ಮೈಸೂರಿನ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ ಓಝೋನ್ ಪದರದ ಸಂರಕ್ಷಣೆ ಕುರಿತು ವಿಶೇಷ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಕಾಲೇಜಿನ ಪ್ರಾಚಾರ್ಯರಾದ ಎಚ್. ಸತ್ಯಪ್ರಸಾದ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಓಝೋನ್ ಪದರವು ಸೂರ್ಯನಿಂದ ಭೂಮಿಗೆ ತಲುಪುವ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಆದರೆ ಆಧುನಿಕ ಬದುಕಿನಲ್ಲಿ ಬಳಕೆಯಾಗುತ್ತಿರುವ ಪರಿಸರಕ್ಕೆ ಹಾನಿ ಮಾಡುವಂತಹ ರಾಸಾಯನಿಕಯುಕ್ತ ವಸ್ತುಗಳು ಓಝೋನ್ ಪದರವನ್ನು ಹಾನಿಗೊಳಿಸುತ್ತಿವೆ ಎಂದರಲ್ಲದೇ, ಈ ವರ್ಷದ ವಿಶ್ವ ಓಝೋನ್ ದಿನಾಚರಣೆಯ ಘೋಷವಾಕ್ಯವಾದ “ಓಝೋನ್ ಫಾರ್ ಲೈಫ್” ವಿಷಯದ ಬಗ್ಗೆ ಅರಿವು ಮೂಡಿಸಿದರು.
1994ರಲ್ಲಿ ವಿಶ್ವಸಂಸ್ಥೆಯು ಓಝೋನ್ ಪದರದ ಸಂರಕ್ಷಣೆಯ ಅರಿವು ಮೂಡಿಸಲು ಸೆಪ್ಟೆಂಬರ್ 16ರಂದು ವಿಶ್ವ ಓಝೋನ್ ಸಂರಕ್ಷಣಾ ದಿನವೆಂದು ಘೋಷಿಸಿತು. ನಾವೆಲ್ಲರೂ ಅಧಿಕವಾಗಿ ಬಳಸುವ ರೆಫ್ರಿಜರೇಟರ್, ಎ.ಸಿ. ಮುಂತಾದವುಗಳಿಂದ ಬಿಡುಗಡೆಯಾಗುವ ರಾಸಾಯನಿಕಗಳು ಭೂಮಿಯನ್ನು ಸಂರಕ್ಷಿಸುತ್ತಿರುವ ಓಝೋನ್ ಪದರಕ್ಕೆ ಹಾನಿಯುಂಟು ಮಾಡುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಅತಿನೇರಳೆ ವಿಕಿರಣಗಳಿಂದ ಉಂಟಾಗುವ ಅಪಾಯಕಾರಿ ಪರಿಣಾಮಗಳನ್ನು ಅರಿತು ಜಾಗೃತರಾಗಿರಬೇಕು. ನಮ್ಮ ಪರಿಸರದ ಕುರಿತು ಕಾಳಜಿ ವಹಿಸಿ ನಮ್ಮ ದೈನಂದಿನ ಬದುಕಿನಲ್ಲಿ ವಿಜ್ಞಾನದ ಸಮರ್ಪಕ ಬಳಕೆ ಮತ್ತು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಓಝೋನ್ ಕುರಿತು ತಿಳಿಸಿದರು.
ನೂರಾರು ವಿದ್ಯಾರ್ಥಿಗಳು ಜೂಮ್ ಮೀಟಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಉಪನ್ಯಾಸಕರಾದ ರಮೇಶ್, ಪ್ರದೀಪ್, ಮೇಧಾ, ಮಯೂರಲಕ್ಷ್ಮಿ, ಸುಷ್ಮಾ, ರೂಪಾ, ರಮ್ಯ, ವೈಶಾಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: