
ಪ್ರಮುಖ ಸುದ್ದಿ
ವಿವಾಹಿತ ಮಹಿಳೆಯರಿಂದ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಕಾಮುಕನಿಗೆ ಗೂಸಾ
ರಾಜ್ಯ(ಮಡಿಕೇರಿ)ಸೆ.17:- ವಿವಾಹಿತ ಮಹಿಳೆಯರಿಂದ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಕಾಮುಕನನ್ನ ಹಿಡಿದು ಕೊಡಗು ರಕ್ಷಣಾ ವೇದಿಕೆ ಕಾರ್ಯಕರ್ತರು ಚೆನ್ನಾಗಿ ಥಳಿಸಿದ್ದಾರೆ. ಈತ ವಿವಾಹಿತ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಸಾರ್ವಜನಿಕರೆದುರು ಹಿಡಿದು ಕಾರ್ಯಕರ್ತರು ಗೂಸಾ ನೀಡಿದ್ದಾರೆ. ಮಡಿಕೇರಿ ನಗರದ ಮುದಾಸಿರ್ ಎಂಬಾತನೇ ಮಹಿಳೆಯರ ನಂಬರ್ ಪಡೆದು ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ. ಮೊಬೈಲ್ ಅಂಗಡಿಯಲ್ಲಿ ಕರೆನ್ಸಿ ಹಾಕಿಸಲು ಬಂದ ಮಹಿಳೆಯರಿಂದ ನಂಬರ್ ಪಡೆದು ಅಸಭ್ಯವಾಗಿ ಮೆಸೇಜ್ ಕಳಿಸುತ್ತಿದ್ದ. ಫೇಸ್ ಬುಕ್ ನಲ್ಲೂ ಫೇಕ್ ಅಕೌಂಟ್ ಮಾಡಿ ಅಸಭ್ಯ ಮೇಸೆಜ್ ಮಾಡುತ್ತಿದ್ದ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)