ಮೈಸೂರು

ಪ್ರಾಚೀನ ಕಾಲದ ಬಸವನ ದೇವಾಲಯವನ್ನು ಸ್ವಚ್ಛಗೊಳಿಸಿ, ಗಿಡ ನೆಡುವ ಮೂಲಕ ಪ್ರಧಾನಿ ಜನ್ಮ ದಿನ ಆಚರಣೆ

ಮೈಸೂರು,ಸೆ.17:- ನರೇಂದ್ರ ಮೋದಿಯವರ 70 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಪ್ರಾಚೀನ ಕಾಲದ ಬಸವನ ದೇವಾಲಯವನ್ನು ಇಂದು ಸ್ವಚ್ಛ ಗೊಳಿಸಲಾಯಿತು.
ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ದ ವತಿಯಿಂದ ಮೈಸೂರು ಬೆಂಗಳೂರು ರಸ್ತೆಯ ಎಡಭಾಗದಲ್ಲಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಪಕ್ಕ ಇರುವ ಕಾಡು ಬಸವ ದೇವಸ್ಥಾನವು ಸುಮಾರು 1849 ಕಾಲದಲ್ಲಿ ಪ್ರತಿಷ್ಠಿತ ದೇವಸ್ಥಾನ ವಾಗಿದ್ದು ಪಾಳು ಬಿದ್ದಿತ್ತು. ಆ ಸ್ಥಳದಲ್ಲಿ ರಾಜ ಮಹಾರಾಜ ಕಾಲದ ವೀರಗಲ್ಲು ಗಳು ಇದ್ದು ಇಲ್ಲಿ ಬಸವೇಶ್ವರ ನ ಮೂಲ ವಿಗ್ರಹವನ್ನು ಮೈಸೂರು ಸಂಸ್ಥಾನದ ರಾಜರ ಆಳ್ವಿಕೆಯ ಕಾಲದ ರಾಜ ಮನೆತನದವರು ಪ್ರತಿಪ್ಠಾಪಿಸಿದ್ದಾರೆ. ಇದರ ಸುತ್ತ ಮುತ್ತ ಗಿಡ ಗಂಟೆಗಳನ್ನು ಕಿತ್ತು ಸ್ವಚ್ಛಮಾಡಿ ಸುತ್ತಲೂ ಸುಣ್ಣ ವನ್ನು ಬಳಿದು ಶುಚಿ ಗೊಳಿಸಲಾಯಿತು.

ಬಿಜೆಪಿ ನಗರ ಅಧ್ಯಕ್ಷರಾದ ಟಿ.ಎಸ್ ಶ್ರೀ ವತ್ಸ ಮಾತನಾಡಿ ನಗರ ಭಾಜಪ ಘಟಕ ದ ವತಿಯಿಂದ ನಗರದ 65 ವಾರ್ಡ್ ಗಳಲ್ಲೂ ಒಂದಲ್ಲ ಒಂದು ರೀತಿಯ ಚಟುವಟಿಕೆಗಳು ನಡೆಯುತ್ತಿದ್ದು ಮುಂದಿನ ವರ್ಷಗಳ ಕಾಲ ನಿರಂತರವಾಗಿ ಸೇವಾ ಸಪ್ತಾಹದ ಅಡಿಯಲ್ಲಿ ರೈತ ಮೋರ್ಚಾದವರು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ,ಗೋವು ಉಳಿವಿಗಾಗಿ ಗೋ ಪೂಜೆ ಮತ್ತು ಅದಕ್ಕೆ ಮೇವು ವಿತರಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಮೋರ್ಚಾ,ಎಸ್,ಟಿ,ಮೋರ್ಚಾ,ಮಹಿಳಾ ಮೋರ್ಚಾ,ಎಸ್.ಸಿ ಮೋರ್ಚಾ,ಅಲ್ಪ ಸಂಖ್ಯಾಂತರ ಮೋರ್ಚಾ ದವರು ” ಸ್ವಚ್ಛ ಭಾರತ್ ಶೇಷ್ಠ ಭಾರತ್” ನ ಅಡಿಯಲ್ಲಿ ಮೈಸೂರು ನಗರದಲ್ಲಿ ಒಂದಲ್ಲ ಒಂದು ರೀತಿ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಿದ್ದು,ಯುವ ಮೋರ್ಚಾದ ತಂಡವು ರಕ್ತದಾನ ಮಾಡುವ ನಿಟ್ಟಿನಲ್ಲಿ ನೂರಾರು ಯುವಕರು ಕಾರ್ಯ ಪ್ರವರ್ತರಾಗಿದ್ದಾರೆ. ಭಾ.ಜ.ಪ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಅಚರಿಸುತ್ತಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ ನೆಚ್ಚಿನ ಪ್ರಧಾನಿ ಯವರ ಹುಟ್ಟು ಹಬ್ಬದ ಅಂಗವಾಗಿ ಅವರ ನೂರಾರು ಯೋಜನೆ ಗಳನ್ನು ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಬರುವ 188 ಜಾತಿಯ ಎಲ್ಲಾ ವರ್ಗದವರು ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಹಾಗೇಯೇ ರಾಜ್ಯದ ಪ್ರತಿ ಮನೆ ಮನೆಗೂ ಮೋದಿ ಯವರ ಯೋಜನೆಗಳನ್ನು ತಲುಪಿಸಬೇಕು. ತಿಂಗಳಿಗೆ ಒಂದು ಗ್ರಾಮದಂತೆ ಅಲ್ಲಿಯ ಅನಕ್ಷರಸ್ಥರನ್ನು ವಿದ್ಯಾವಂತರನ್ನಾಗಿ ಮಾಡಬೇಕು,ಗ್ರಾಮ ವಿಕಾಸ್ ಯೋಜನೆ ಸಮರ್ಪಕವಾಗಿ ತಲುಪುವ ನಿಟ್ಟಿನಲ್ಲಿ ಕಾರ್ಯಕರ್ತರು ಸಜ್ಜಾಗಬೇಕೆಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಜೋಗಿಮಂಜು ಮಾತನಾಡಿ ನರೇಂದ್ರ ಮೋದಿ ಯವರು ಹಿಂದುಳಿದ ವರ್ಗದವರಾಗಿದ್ದು ಅವರ ಕಲ್ಪನೆಯಂತೆ ಸ್ವಚ್ಛ ಬಾರತ್ ಶ್ರೇಷ್ಠ ಭಾರತ್ ,ಗ್ರಾಮ ವಿಕಾಸ್,ಆಯುಷ್ಮಾನ್ ಭಾರತ್,ಪ್ರಾಚೀನ ಕಾಲದ ಪಳೆಯುಳಿಕೆಗಳ ಉಳುವಿಕೆಯ ಯೋಜನೆ,ಇಂತಹ ನೂರಾರು ಯೋಜನೆಯ ಅನುಷ್ಠಾನ ತರುವ ನಿಟ್ಟಿನಲ್ಲಿ ಅದರಲ್ಲೂ ಮಹಾ ಮಾರಿ ಕೋವಿಡ್ 19 ನ ಸಂಧರ್ಭದಲ್ಲಿ ಭಾರತ ರಾಷ್ಟ್ರ ದ ಜನಸಾಮಾನ್ಯರ ಸುಭದ್ರತೆಗೆ ಹಗಲು ಇರುಳು ದುಡಿಯುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆರೋಗ್ಯ ವಾಗಿರಲೆಂದು ಅವರ 70 ನೇ ಹುಟ್ಟು ಹಬ್ಬಕ್ಕೆ ಜೋಡಿ ಬಸವೇಶ್ವರ ನಿಗೆ ಪೂಜೆ, ಅದರ ಸುತ್ತ ಮುತ್ತ ಸ್ವಚ್ಛತಾ ಕಾರ್ಯ,ಪ್ರಾಚೀನಕಾಲದ ಶಿಲೆಗಳಿಗೆ ಸುಣ್ಣ ಬಳಿಯಲಾಗಿದೆ. ಅವರ ಹೆಸರಿನಲ್ಲಿ 70 ಗಿಡಗಳು ನೆಡಲಾಗಿದ್ದು, ಸಾರ್ವಜನಿಕ ರಿಗೆ ಉಚಿತವಾಗಿ ಸಿಹಿ ವಿತರಿಸಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದಶಿಗಳಾದ ವಾಣೀಶ್,ಗಿರಿಧರ್, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಥಾಮಸ್, ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಳಾದ ಗೋಪಾಲ್, ಮಣಿರತ್ನಂ, ಉಪಾಧ್ಯಕ್ಷ ಭರತ್,ಕಾರ್ಯದರ್ಶಿ ಶಿವರಾಜ್, ಹರೀಶ್,ಜಗದೀಶ್,ಸ್ವಾಮಿಗೌಡ,ಆನಂದ್,ನಾಗರಾಜು ರಾಜೀವ್ ಸ್ನೇಹ ಬಳಗದ ಸಂಚಾಲಕ ಕುಮಾರ್, ಮಂಡಲ ಅಧ್ಯಕ್ಷರುಗಳಾದ ನಾಗೇಶ್,ರಾಚಪ್ಪಾಜೀ,ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: