ಪ್ರಮುಖ ಸುದ್ದಿಮೈಸೂರು

ಪ್ರಧಾನಿ ಮೋದಿ ಜನ್ಮ ದಿನದ ಪ್ರಯುಕ್ತ ರಕ್ತದಾನ ಮಾಡಿದ ಸಂಸದ ಪ್ರತಾಪ್ ಸಿಂಹ


ಮೈಸೂರು,ಸೆ.17:- ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನ. ಬಿಜೆಪಿ ಮುಖಂಡರು, ಕಾರ್ಯಕರ್ತರು ಜನ್ಮದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ದೇಹಲಿಯಲ್ಲಿ ಸಂಸತ್ ಅಧಿವೇಶನ ಸಂಬಂಧ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ದೆಹಲಿಯಲ್ಲಿದ್ದು ಟ್ವೀಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಶುಭ ಹಾರೈಸಿದ್ದಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಹೃತ್ಪೂರ್ವಕ ಅಭಿನಂದನೆಗಳು. ಅವರ ದೂರದೃಷ್ಟಿಯ ನಾಯಕತ್ವ, ಕೇಂದ್ರೀಯ ನೀತಿಗಳಿಂದ ನವ ಭಾರತ ಆತ್ಮನಿರ್ಭರವಾಗುವ ಗುರಿಯತ್ತ ಬುನಾದಿ ಹಾಕಿದ್ದಾರೆ. ತಾಯಿ ಚಾಮುಂಡೇಶ್ವರಿಯಲ್ಲಿ ಅವರ ಉತ್ತಮ ಆರೋಗ್ಯ ಮತ್ತು ಆಯಸ್ಸಿಗಾಗಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಮೋದಿಯವರ 70ನೇ ಜನ್ಮ ದಿನದ ಪ್ರಯುಕ್ತ ಏಮ್ಸ್ ಗೆ ತೆರಳಿ ರಕ್ತದಾನ ಮಾಡಿದ್ದಾರೆ.

Leave a Reply

comments

Related Articles

error: