ಮೈಸೂರು

ನೂರೊಂದು ಗಣಪತಿ ದೇವಸ್ಥಾನದಲ್ಲಿ ಬೇರು ಫೌಂಡೇಶನ್ ವತಿಯಿಂದ ಪ್ರಧಾನಿ ಮೋದಿಯವರ ಹೆಸರಿನಲ್ಲಿ ವಿಶೇಷ ಪೂಜೆ ; ಆಟೋ ಚಾಲಕರಿಗೆ ಮಾಸ್ಕ್ ವಿತರಣೆ


ಮೈಸೂರು,ಸೆ.17:- ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ 70 ನೇ ಹುಟ್ಟುಹಬ್ಬವನ್ನು ಅಗ್ರಹಾರ ವೃತ್ತದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದಲ್ಲಿ ಬೇರು ಫೌಂಡೇಶನ್ ವತಿಯಿಂದ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ , ಅವರಿಗೆ ಆಯುರ್ ಆರೋಗ್ಯ ಲಭಿಸಿ, ಇನ್ನೂ ಹೆಚ್ಚಿನದಾಗಿ ದೇಶ ಸೇವೆ ಮಾಡಲು ದೇವರು ಶಕ್ತಿ ನೀಡಲಿ ಭಾರತ ದೇಶ ಕೊರೋನಾ ಮುಕ್ತ ರಾಷ್ಟ್ರವಾಗಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿರುವ ಜನರಿಗೆ ಹಾಗೂ ಆಟೋ ಚಾಲಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಮಾತನಾಡಿದ ಬೇರು ಫೌಂಡೇಶನ್ ಅಧ್ಯಕ್ಷ ಮಧು ಎನ್ ಕೊರೋನಾ ಸೋಂಕಿತರು ನಮ್ಮ ಮೈಸೂರಿನಲ್ಲಿ ಪ್ರತಿದಿನ 700 ರಿಂದ 1 ಸಾವಿರದವರೆಗೂ ಹೆಚ್ಚುತ್ತಿದ್ದು ಸಾರ್ವಜನಿಕರು ಮಾಸ್ಕ್ ಧರಿಸಿ ಅದಕ್ಕೆ ಬೇಕಾದಂತಹ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡು ಜಾಗೃತಿಯಿಂದ ಜೀವನವನ್ನು ನಡೆಸಬೇಕು. ಜೀವ ಇದ್ದರೆ ಜೀವನ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಗೂ ರಾಷ್ಟ್ರ ಸರ್ಕಾರ ದೇಶದ ಏಳಿಗೆಗೆ ದೇಶದ ಜನರ ಆರೋಗ್ಯದ ವಿಚಾರವಾಗಿ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಅವರ ಜೊತೆ ಕೈ ಜೋಡಿಸಿ ಇಡೀ ರಾಷ್ಟ್ರವನ್ನು ಕೊರೋನಾ ಮುಕ್ತ ರಾಷ್ಟ್ರವಾಗಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಇಳೈ ಆಳ್ವಾರ್ ಸ್ವಾಮೀಜಿ , ಯುವ ಮುಖಂಡ ವಿಕ್ರಂ ಅಯ್ಯಂಗಾರ್, ಜೈ ಅರ್ಜುನ್, ಸುಚೇಂದ್ರ ,ರಾಕೇಶ್ ಭಟ್ , ಚಕ್ರಪಾಣಿ , ಪ್ರಶಾಂತ್ ಭಾರದ್ವಾಜ್, ರಾಕೇಶ್, ಹಾಗೂ ಬೇರು ಫೌಂಡೇಶನ್ ಸದಸ್ಯರು ಭಾಗವಹಿಸಿದ್ದರು .(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: