ಕರ್ನಾಟಕಪ್ರಮುಖ ಸುದ್ದಿಮನರಂಜನೆ

 ಸಾಹಸಸಿಂಹ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಬೆಂಗಳೂರು,ಸೆ.16-ಕನ್ನಡದ ಹೆಮ್ಮೆಯ ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುತ್ತಿದೆ.

ದೇಶದಲ್ಲಿ ನಡೆಯುವ ಪ್ರಮುಖ ವಿದ್ಯಮಾನಗಳು, ಸಾಧಕರ ಮಹತ್ವದ ಹೆಜ್ಜೆಗಳನ್ನು ಪೋಸ್ಟಲ್ ಸ್ಟ್ಯಾಂಪ್, ಪೋಸ್ಟಲ್ ಕವರ್ ಮೂಲಕ ಭಾರತ ಸರ್ಕಾರದ ಅಂಚೆ ಇಲಾಖೆ ಆಗಾಗ ದಾಖಲಿಸುತ್ತಾ ಬಂದಿದೆ. ಇದೀಗ ವಿಷ್ಣು ಹೆಸರನ್ನು ಇನ್ನಷ್ಟು ನೆನಪಿನಲ್ಲುಳಿಯುವಂತೆ ಮಾಡುವುದಕ್ಕೆ ಅಂಚೆ ಇಲಾಖೆ ಹೆಜ್ಜೆ ಇಟ್ಟಿದೆ.

ಈ ಲಕೋಟೆಯ (ಪೋಸ್ಟಲ್​ ಕವರ್) ಮೂಲಕ ವಿಷ್ಣುವರ್ಧನ್​ ಅವರ ಹೆಸರು ಅಂಚೆ ಕಚೇರಿಯ ದಾಖಲೆಗಳಲ್ಲಿ ಶಾಶ್ವತವಾಗಿ ಉಳಿಯುವುದಷ್ಟೇ ಅಲ್ಲ, ದೇಶದ ಯಾವುದೇ ಮೂಲೆಯಲ್ಲಿ ಅಂಚೆಚೀಟಿ ಪ್ರದರ್ಶನವಾದರೂ, ಅಲ್ಲಿ ಈ ವಿಶೇಷ ಪೋಸ್ಟಲ್ ಕವರ್ ಪ್ರದರ್ಶನವಾಗಲಿದೆ.

ನಾಳೆ ವಿಷ್ಣುವರ್ಧನ್​ ಅವರ 70ನೇ ಜಯಂತೋತ್ಸವದ ಪ್ರಯುಕ್ತ, ಮಧ್ಯಾಹ್ನ 3 ಗಂಟೆಗೆ ವಿಧಾನ ಸೌಧದ ಎದುರಿನ ಕೇಂದ್ರ ಅಂಚೆ ಇಲಾಖೆಯಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಈ ಲಕೋಟೆ ಬಿಡುಗಡೆಯಾಗಲಿದೆ.

ಈ ಸಂದರ್ಭದಲ್ಲಿ ನಟ-ನಿರ್ದೇಶಕ ‘ಜೋಗಿ’ ಪ್ರೇಮ್​, ಚೀಫ್​ ಪೋಸ್ಟ್​ ಮಾಸ್ಟರ್​ ಜನರಲ್​ ಶಾರದಾ ಸಂಪತ್​, ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್​ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. (ಎಂ.ಎನ್)

 

Leave a Reply

comments

Related Articles

error: