ಮೈಸೂರು

ಗುಲಾಮಗಿರಿ ಮಾಡಲು ಬಿಜೆಪಿ ಪಕ್ಷ ಸೇರಿದ್ದಾರೆ : ಶಂಕರ್ ಮೊನವಳ್ಳಿ

ಕಾಂಗ್ರೆಸ್‍ ಪಕ್ಷದಿಂದ ಎಲ್ಲಾ  ಸ್ಥಾನ-ಮಾನಗಳನ್ನು ಪಡೆದುಕೊಂಡು ಈಗ ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್, ಎಸ್.ಎಂ.ಕೃಷ್ಣ ಅವರು ಬಿಜೆಪಿಯಲ್ಲಿ ಗುಲಾಮಗಿರಿ ಮಾಡಲು ಹೋಗಿದ್ದಾರೆಯೇ? ಎಂದು ಕೆಪಿಸಿಸಿ ರಾಜ್ಯ ಸಂಚಾಲಕ ಶಂಕರ್ ಮೊನವಳ್ಳಿ ಪ್ರಶ್ನಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ಎಂ ಕೃಷ್ಣ ಅವರಿಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನು ಕೊಟ್ಟಿದೆ. ಆದರೆ ಅವರು ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬಳಸಿಕೊಂಡು ಈಗ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇನ್ನೂ ಶ್ರೀನಿವಾಸಪ್ರಸಾದ್ ಅವರು ಸಿದ್ದರಾಮಯ್ಯ ಅವರಿಂದ ನೋವಾಗಿದೆ ಎಂದು ಹೇಳುತ್ತಾರೆ. ಅವರಿಗೆ ಏನು ನೋವಾಗಿದೆ? ಸಿದ್ದರಾಮಯ್ಯ ಅವರು ಏನು ಮಾಡಿದ್ದಾರೆ?  ಕಾಂಗ್ರೆಸ್‍ನಿಂದ ಎಲ್ಲವನ್ನು ಪಡೆದುಕೊಂಡು ಈಗ ಬಿಜೆಪಿಯಲ್ಲಿ ಗುಲಾಮಗಿರಿ ಮಾಡಲು, ಕಸ ಹೊಡೆಯಲು ಹೋಗಿದ್ದಾರಾ ಎಂದು  ವ್ಯಂಗ್ಯವಾಡಿದರು.

ಬಿಜೆಪಿಯ ಸಿದ್ಧಾಂತವೇನು? ಬಿಜೆಪಿಗೆ ನೈತಿಕತೆ ಇಲ್ವಾ? ಎಂದು ಪ್ರಶ್ನಿಸಿದ ಅವರು  ಗುಲಾಮಗಿರಿಯಿಂದ ಹೊರಬರಬೇಕೆಂದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ವಿ.ಶ್ರೀನಿವಾಸಪ್ರಸಾದ್ ಅವರು ಚುನಾವಣೆಯಲ್ಲಿ ಸೋಲನ್ನು ಅನುಭವಿಸುವ ಮುನ್ನ ಚುನಾವಣಾ ಕಣದಿಂದ ಹಿಂದೆ ಸರಿಯಬೇಕು ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸುರೇಶ್ ಕಾರವಾರ, ಪ್ರಸನ್ನ ಕುಮಾರ್, ಕನ್ನೀರಾಮ್ ರಾಥೋಡ್, ಕಾಳಯ್ಯ, ಅಶೋಕ್ ಕುಮಾರ್  ಹಾಜರಿದ್ದರು. (ಎಲ್.ಜಿ-ಎಸ್.ಎಚ್)

 

Leave a Reply

comments

Related Articles

error: