ಪ್ರಮುಖ ಸುದ್ದಿಮನರಂಜನೆ

ತೆಲುಗಿನ ಕಿರುತೆರೆ ನಟಿ ಆತ್ಮಹತ್ಯೆ ಪ್ರಕರಣ : ನಿರ್ಮಾಪಕನ ಬಂಧನ

ದೇಶ( ಹೈದರಾಬಾದ್)ಸೆ.18:- ತೆಲಂಗಾಣ ಪೊಲೀಸರು ತೆಲುಗಿನ ಖ್ಯಾತ ಕಿರುತೆರೆ ನಟಿ ಕೊಂಡಪಲ್ಲಿ ಶ್ರಾವಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಖ್ಯಾತ ನಿರ್ಮಾಪಕರೊಬ್ಬರನ್ನು ಬಂಧಿಸಿದ್ದಾರೆ.
ಟಾಲಿವುಡ್ ನಲ್ಲೂ ನಟಿ ಶ್ರಾವಣಿ ಆತ್ಮಹತ್ಯೆ ಪ್ರಕರಣ ಸುದ್ದಿಗೆ ಗ್ರಾಸವಾಗಿದ್ದು, ಶ್ರಾವಣಿ ಅತ್ಮಹತ್ಯೆಗೆ ಕಾರಣರಾದವರನ್ನು ಶಿಕ್ಷೆಗೊಳಪಡಿಸಿ ಎಂಬ ಆಗ್ರಹ ಕೇಳಿಬರುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೈದರಾಬಾದ್ ಪೊಲೀಸರು ಖ್ಯಾತ ನಿರ್ಮಾಪಕ ಅಶೋಕ್ ರೆಡ್ಡಿಯನ್ನು ಬಂಧಿಸಿದ್ದಾರೆ. ಇವರು ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರ “ಆರ್ ಎಕ್ಸ್ 100”ನ ನಿರ್ಮಾಪಕರು.
ನಟಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಸಾಯಿ ಕೃಷ್ಣ ರೆಡ್ಡಿ ಮತ್ತು ದೇವರಾಜ್ ರೆಡ್ಡಿ ಕೂಡಾ ಆರೋಪಿಗಳಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಬಂಧಿತರನ್ನು ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: