ಪ್ರಮುಖ ಸುದ್ದಿಮನರಂಜನೆ

ಪ್ರಜ್ವಲ್ ಕರ್ಪೆ ನಿರ್ದೇಶಿಸಿದ ‘ಮೌನ ಮಾತಾದಾಗ ’ ಮೂಕಿ ಕನ್ನಡ ಕಿರುಚಿತ್ರಕ್ಕೆ ಅತ್ಯುತ್ತಮ ಚಿತ್ರ

ರಾಜ್ಯ(ಬೆಂಗಳೂರು)ಸೆ.18:- ದಕ್ಷಿಣ ಕನ್ನಡದ ಪುತ್ತೂರಿನ ಮೂಲದ ಪ್ರಜ್ವಲ್ ಕರ್ಪೆ ಬರೆದು ನಿರ್ದೇಶಿಸಿದ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ‘ಮೌನ ಮಾತಾದಾಗ ’ ಮೂಕಿ ಕನ್ನಡ ಕಿರುಚಿತ್ರಕ್ಕೆ ಏಷ್ಯನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ -2020 ರಲ್ಲಿ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ಲಭಿಸಿದೆ.

ಈ ಕಿರುಚಿತ್ರವನ್ನು ಜರ್ಮನಿಯ ಮ್ಯಾಕ್ಸಿಮ್ ಗೋರ್ಕಿ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗಿತ್ತು. ಚಿತ್ರದಲ್ಲಿ ಹಿರಿಯ ನಟ ಮತ್ತು ಗೀತರಚನೆಕಾರ ಡಾ. ಕಾಸರಗೋಡು ಅಶೋಕ್ ಕುಮಾರ್ ಮತ್ತು ರಂಗಭೂಮಿ ಹಿನ್ನೆಲೆಯ ಸುಬ್ರಮಣ್ಯ ಪೈ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ನಿರ್ದೇಶಕ ಪ್ರಜ್ವಲ್ ಸಹ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತುಳು ಚಲನಚಿತ್ರ ಭೋಜರಾಜ್ ಎಂಬಿಬಿಎಸ್ ನಲ್ಲಿ ಸಹಾಯಕ ನಿರ್ದೇಶಕರಾಗಿ ಪ್ರಜ್ವಲ್ ಕಾರ್ಪೆ ಕೆಲಸ ಮಾಡಿದ್ದು ಕೆಲ ಕಿರುಚಿತ್ರಗಳು ಮತ್ತು ಆಲ್ಬಮ್ ಸಾಂಗ್ ಅನ್ನು ನಿರ್ದೇಶಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: