ಮೈಸೂರು

ನಂಜನಗೂಡು ತಾ.ಪಂ ಉಪಾಧ್ಯಕ್ಷ ಗೋವಿಂದರಾಜು ಕೊರೋನಾ ಗೆ ಬಲಿ

ಮೈಸೂರು,ಸೆ.17:- ನಂಜನಗೂಡು ತಾ.ಪಂ ಉಪಾಧ್ಯಕ್ಷ ಗೋವಿಂದರಾಜು ಅವರು ಕೊರೋನಾಗೆ ಬಲಿಯಾಗಿದ್ದಾರೆ.

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದು, ನಂಜನಗೂಡು ತಾಲೂಕಿನ ಸ್ವಗ್ರಾಮ ಹೆಜ್ಜಿಗೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಕೋವಿಡ್-19 ವಿಧಿವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನಡೆಯಲಿದೆ. ವಾರದ ಹಿಂದಷ್ಟೇ ಗೋವಿಂದರಾಜುಗೆ ಕೊರೋನಾ ವೈರಸ್ ಸೋಂಕು ತಗುಲಿತ್ತು. ಗೋವಿಂದರಾಜು ನಿಧನಕ್ಕೆ ನಂಜನಗೂಡು ತಾಲೂಕು ಆಡಳಿತ ಸಂತಾಪ ವ್ಯಕ್ತಪಡಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: