ಸುದ್ದಿ ಸಂಕ್ಷಿಪ್ತ

ಹೆಬ್ಬಾರ್ ಶ್ರೀ ವೈಷ್ಣವ ಉಪಸಭಾದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿಆಹ್ವಾನ

ಮೈಸೂರು, ಸೆ.18:- ಅಗತ್ಯ ಮತ್ತು ಪ್ರತಿಭೆಯ ಆಧಾರದ ಮೇಲೆ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಗೆ ಸೇರಿರುವ ಹೆಬ್ಬಾರ್ ಶ್ರೀ ವೈಷ್ಣವ ಪಂಗಡದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು (12ನೇ ತರಗತಿ) ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿತೇರ್ಗಡೆ ಹೊಂದಿರಬೇಕು ಹಾಗೂ ಮುಂದೆತಾಂತ್ರಿಕ ವಿಭಾಗದಲ್ಲಿ ಶಿಕ್ಷಣ ಮುಂದುವರೆಸಲುಆಸಕ್ತರಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆ ಹೊಂದಿರುವಂತಹ ವಿದ್ಯಾರ್ಥಿಗಳನ್ನೂ ಸಹ ಪರಿಗಣಿಸಲಾಗುತ್ತದೆ. ವಿದ್ಯಾರ್ಥಿ ವೇತನದ ಮೊತ್ತವು ರೂ.25,000 (ರೂ.ಇಪ್ಪತ್ತೈದು ಸಾವಿರ) ಅಥವಾಅದಕ್ಕಿಂತ ಹೆಚ್ಚಿನದಾಗಿರುತ್ತದೆ.
ಅಂಕಪಟ್ಟಿ ಮತ್ತುಇತರ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳನ್ನು ತಾವು ವಿದ್ಯಾಭ್ಯಾಸ ಮಾಡಿದ ಶಾಲಾ/ಕಾಲೇಜುಗಳ ಮುಖ್ಯಸ್ಥರಿಂದ ಮೇಲು ಸಹಿ ಮಾಡಿಸಬೇಕು.ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳ ನೈಜ (ಓರಿಜಿನಲ್) ಪ್ರತಿಗಳನ್ನು ವಿದ್ಯಾರ್ಥಿ ವೇತನ ತೆಗೆದುಕೊಳ್ಳುವಾಗ ಪರಿಶೀಲನೆಗಾಗಿ ಹಾಜರುಪಡಿಸಬೇಕು.
ಅಭ್ಯರ್ಥಿಗಳ ಪೋಷಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಉದ್ಯೋಗ, ವಾರ್ಷಿಕ ವರಮಾನ (ಪುರಾವೆ ಸಹಿತ) ಅಗತ್ಯ ವಿವರ ನೀಡಬೇಕು.ಆಯ್ಕೆಯಾಗುವಅಭ್ಯರ್ಥಿ ಸಭಾದ ಸದಸ್ಯರಿಗೆಗೊತ್ತಿರುವ ವ್ಯಕ್ತಿಯಿಂದವೈಯಕ್ತಿಕಶೂರಿಟಿ ನೀಡಬೇಕು.
ಭರ್ತಿ ಮಾಡಿದ ಅರ್ಜಿಗಳನ್ನು ಕಛೇರಿ ದಿನಗಳಂದು ಸಂಜೆ 5ರಿಂದ 7 ಗಂಟೆಯೊಳಗೆ ಕಾರ್ಯದರ್ಶಿ, ಗೋದಾಗೋವಿಂದ ಸೇವಾ ಸಮಿತಿ, ಹೆಬ್ಬಾರ್ ಶ್ರೀ ವೈಷ್ಣವ ಉಪಸಭಾ, ಪ್ರವಚನ ಸಭಾಂಗಣ, ಸರಸ್ವತಿಪುರಂ, ಮೈಸೂರು (ಸರಸ್ವತಿಚಿತ್ರಮಂದಿರದಎದುರು) ಅಥವಾ ಹೆಚ್.ಜಿ.ಸತ್ಯನಾರಾಯಣ, ನಂ.627, ‘ಎಂ’ ಬ್ಲಾಕ್, 2ನೇ ಹಂತ, ಕುವೆಂಪುನಗರ, ಮೈಸೂರುಇಲ್ಲಿಗೆಅಕ್ಟೋಬರ್ 20ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ 9480194204 ಸಂರ್ಪಕಿಸಬಹುದು.

Leave a Reply

comments

Related Articles

error: