ಪ್ರಮುಖ ಸುದ್ದಿಮೈಸೂರು

ದಸರಾ ಉದ್ಘಾಟಕರ ಆಯ್ಕೆ ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಸೆ.18:- ದಸರಾ ಉದ್ಘಾಟಕರ ಆಯ್ಕೆ ಇನ್ನೂ ಆಗಿಲ್ಲ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿಂದು ದಸರಾ ಉದ್ಘಾಟಕರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಇನ್ನೂ ಉದ್ಘಾಟಕರ ಆಯ್ಕೆ ಆಗಿಲ್ಲ. ಉದ್ಘಾಟಕರ ಆಯ್ಕೆ ಬಗ್ಗೆ ಆಯಾ ಇಲಾಖೆಗಳಿಗೆ ಸೂಚಿಸಲಾಗಿದೆ. ಅವರು ಆಯ್ಕೆ ಮಾಡಿ ಪಟ್ಟಿ ನೀಡುತ್ತಾರೆ. ಆ ಪಟ್ಟಿಯನ್ನು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದರು.
ಸರಳ ದಸರಾಗೆ 10ಕೋಟಿಯ ಅಗತ್ಯತೆ ವಿಚಾರಕ್ಕೆ ಪ್ರತಿಕ್ರಿಯಿಸಿ ಹತ್ತು ದಿನದ ಕಾರ್ಯಕ್ರಮಕ್ಕೆ ಅನುದಾನದ ಅಗತ್ಯವಿದೆ. ಯಾವುದೇ ಸಂಪ್ರದಾಯಿಕ ದಸರಾ ಕಾರ್ಯಕ್ರಮವನ್ನು ಕೈಬಿಡಲ್ಲ. ರಾಜಮನೆತನದವರಿಗೆ ಸರ್ಕಾರದಿಂದ ಏನು ಕೊಡಬೇಕು ಅದನ್ನು ಕೊಡುತ್ತೇವೆ. ಅದರಲ್ಲಿ ಯಾವುದೇ ಬದಲಾವಣೆ ಇರಲ್ಲ. ಹಿಂದೆ ಯಾವ ರೀತಿ ಅವರಿಗೆ ಗೌರವ ಕೊಡಲಾಗುತ್ತಿತ್ತು,ಅದು ಮುಂದುವರೆಯಲಿದೆ. ಸದ್ಯದಲ್ಲೇ ಅವರನ್ನು ಅಧಿಕೃತವಾಗಿ ಭೇಟಿ ಮಾಡಿ ಆಹ್ವಾನ ನೀಡಲಾಗುತ್ತೆ. ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಇಂದು ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಸಭೆಯಲ್ಲಿ ಈ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡುತ್ತೇನೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನ್ನನ್ನು ಕೇಳಬೇಡಿ. ನೀವು ಏನಿದ್ದರೂ ಮುಖ್ಯಮಂತ್ರಿಗಳನ್ನೇ ಕೇಳಬೇಕು. ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡೋದು ಅವರಿಗೆ ಬಿಟ್ಟ ವಿಚಾರ. ಅದನ್ನು ಮುಖ್ಯಮಂತ್ರಿಗಳೇ ಅಂತಿಮ ಮಾಡುತ್ತಾರೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: