ದೇಶಪ್ರಮುಖ ಸುದ್ದಿ

ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ, ಮಾಜಿ ಸದಸ್ಯ ಕಲಿಲಾ ವಾತ್ಸಾಯ ನಿಧನ: ರಾಜ್ಯಸಭೆಯಲ್ಲಿ ಸಂತಾಪ

ನವದೆಹಲಿ,ಸೆ.18- ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಮತ್ತು ಮಾಜಿ ಸದಸ್ಯ ಕಪಿಲಾ ವಾತ್ಸಾಯ ನಿಧನಕ್ಕೆ ರಾಜ್ಯಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಸಂತಾಪ ಸೂಚಿಸಿ ಸದನವನ್ನು 30 ನಿಮಿಷ ಮುಂದೂಡಲಾಯಿತು.

ಸಂಸತ್ತಿನ ಮುಂಗಾರು ಅಧಿವೇಶನದ ಐದನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯಸಭಾ ಸಭಾಪತಿ ಡಾ.ಎಂ. ವೆಂಕಯ್ಯನಾಯ್ಡು, ಅಶೋಕ್ ಗಸ್ತಿ ಮತ್ತು ಕಪಿಲಾ ವಾತ್ಸಾಯನ ಅವರ ಸಂತಾಪ ಸೂಚಕ ಸಂದೇಶ ಓದಿದರು. ನಂತರ ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನ ಆಚರಿಸಿ ಕಲಾಪವನ್ನು 30 ನಿಮಿಷಗಳ ಕಾಲ ಮುಂದೂಡಲಾಯಿತು.

ಹಾಲಿ ಸದಸ್ಯರು ನಿಧನರಾದರೆ ಅವರ ಗೌರವಾರ್ಥ ಸದನವನ್ನು ಒಂದು ದಿನದ ಮಟ್ಟಿಗೆ ಮುಂದೂಡುವುದು ಸಂಸತ್ತಿನ ಸಂಪ್ರದಾಯ. ಅದರೆ ಅಧಿವೇಶನದ ಅವಧಿ ಕಡಿಮೆ ಇರುವ ಕಾರಣ 30 ನಿಮಿಷಗಳ ಕಾಲ ಮಾತ್ರ ಮುಂದೂಡಲಾಯಿತು.

ಕರ್ನಾಟಕವನ್ನು ಪ್ರತಿನಿಧಿಸಿದ್ದ ಅಶೋಕ್ ಗಸ್ತಿ (55 ) ಮೊದಲ ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಕಳೆದ ಜೂನ್ 26ರಂದು ಅವರು ಮೇಲ್ಮನೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಕೋವಿಡ್ ವೈರಸ್ ಸೋಂಕಿನಿಂದಾಗಿ ಅವರು ಕಲಾಪಗಳಲ್ಲಿ ಹಾಜರಾಗಿರಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಅಶೋಕ್ ಗಸ್ತಿ ನಿನ್ನೆ ಕೊನೆಯುಸಿರೆಳೆದರು. ರಾಜ್ಯಸಭೆಯ ಮಾಜಿ ಸದಸ್ಯರಾಗಿದ್ದ ಕಪಿಲಾ ವಾತ್ಸಾಯನ (91) ಅವರು ನಿನ್ನೆ ಮುಂಜಾನೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: