ಮೈಸೂರು

ಧಾರ್ಮಿಕ ವಿಧಿ ವಿಧಾನದೊಂದಿಗೆ ಅರಮನೆಯಲ್ಲಿ ನಡೆದ ಸಿಂಹಾಸನ ಜೋಡಣಾ ಕಾರ್ಯ

ಮೈಸೂರು,ಸೆ.18:- ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರಿನಲ್ಲಿ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದ್ದು, ನವರಾತ್ರಿ ಪ್ರಯುಕ್ತ ಇಂದು ಅಂಬಾವಿಲಾಸ ಅರಮನೆಯಲ್ಲಿ ಇಂದು ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯ ನಡೆಯಿತು.
ರತ್ನಖಚಿತ ಸಿಂಹಾಸನ ಜೋಡಣಾ ಕಾರ್ಯದೊಂದಿಗೆ ಮೈಸೂರು ಅರಮನೆಯಲ್ಲಿ ದಸರಾ ದರ್ಬಾರ್ ಸಿದ್ಧತೆ ಚಾಲನೆ ಲಭಸಿದಂತಾಗಿದೆ. ಅರಮನೆ ಪಂಚಾಂಗದಂತೆ ಇಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಸಿಂಹಾಸನ ಜೋಡಣೆ ಅಂಗವಾಗಿ ಚಾಮುಂಡೇಶ್ವರಿ ಪೂಜೆ, ಗಣಪತಿ ಹೋಮ ನಡೆಯಿತು. ಬೆಳಿಗ್ಗೆ 10ರಿಂದ 10.15ರ ಅವಧಿಯ ತುಲಾ ಲಗ್ನದಲ್ಲಿ ಜೋಡಣೆ ಕಾರ್ಯ ನಡೆದಿದೆ. ಈ ಬಾರಿ ದಸರಾ ಉತ್ಸವ ಅ.17ರಿಂದ ಆರಂಭವಾಗಿ ಅ.26ರಂದು ಸಂಪನ್ನಗೊಳ್ಳಲಿದೆ. ಇದೇ ವೇಳೆ ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಖಾಸಗಿ ದರ್ಬಾರ್ ನಡೆಯಲಿದೆ. ಅರಮನೆಯ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನದ ಬಿಡಿಭಾಗಗಳನ್ನು ದರ್ಬಾರ್ ಹಾಲ್ ಗೆ ತಂದು ಜೋಡಿಸಲಾಯಿತು. ಪ್ರತಿವರ್ಷದಂತೆ ಅರಮನೆಯ ಸಿಬ್ಬಂದಿ ಹಾಗೂ ಗೆಜ್ಜಹಳ್ಳಿ ಗ್ರಾಮದ ಕುಶಲಕರ್ಮಿಗಳು ಸಿಂಹಾಸನ ಜೋಡಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: