ಮೈಸೂರು

ಸಚಿವ ಸಂಪುಟ ವಿಸ್ತರಣೆ ವಿಚಾರ : ತಾಯಿ ಮಕ್ಕಳಿಗೆ ಎಂದೂ ಮೋಸ ಮಾಡಲ್ಲ ಎಂದ್ರು ಶಾಸಕ ರಾಮದಾಸ್

ಮೈಸೂರು,ಸೆ.18:- ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಎಸ್.ಎ.ರಾಮದಾಸ್ ತಾಯಿ ಮಕ್ಕಳಿಗೆ ಎಂದೂ ಮೋಸ ಮಾಡಲ್ಲ ಎಂದರು.
ಸಚಿವ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಬೀಡಬೇಕು ಎಂಬುದನ್ನು ನಿರ್ಧಾರ ಮಾಡೋದು ಕ್ಯಾಪ್ಟನ್. ಪಕ್ಷದ ಹಿರಿಯರಾಗಿ ಏನು ಮಾಡಬೇಕೆಂಬುದು ಅವರಿಗೆ ಗೊತ್ತಿದೆ. ಅತಿಥಿಗಳಿಗೆ ಊಟ ಹಾಕಬೇಕೋ ಮನೆಯವರಿಗೆ ಊಟ ಹಾಹಬೇಕೋ ಎಂಬುದನ್ನು ಮನೆಯ ಯಜಮಾನ ತೀರ್ಮಾನ ಮಾಡುತ್ತಾನೆ. ನಾನು ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಪಕ್ಷ ಯಾವುದೆ ಜವಾಬ್ದಾರಿ ಕೊಟ್ಟರೂ ನಿರ್ವಹಿಸಲು ಸಿದ್ದನಿದ್ದೇನೆ. ಸಂಪುಟದಲ್ಲಿ ಅವಕಾಶ ಸಿಕ್ಕರೆ ಕೆಲಸ ಮಾಡುತ್ತೇನೆ. ಇಲ್ಲವಾದರೆ ಶಾಸಕನಾಗಿ ಇರುತ್ತೇನೆ. ಆದ್ರೆ ತಾಯಿ ಮಕ್ಕಳಿಗೆ ಅನ್ಯಾಯ ಮಾಡೋದಿಲ್ಲ ಅನ್ನೋ ವಿಶ್ವಾಸ ಇದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: