ದೇಶಪ್ರಮುಖ ಸುದ್ದಿ

ಖ್ಯಾತ ಫ್ಯಾಶನ್ ಡಿಸೈನರ್ ಶರ್ಬರಿ ದತ್ತ ಶವವಾಗಿ ಪತ್ತೆ

ಕೋಲ್ಕತ್ತಾ,ಸೆ.18-ಬಂಗಾಳದ ಕವಿ ಅಜಿತ್ ದತ್ತ ಅವರ ಪುತ್ರಿ, ಖ್ಯಾತ ಫ್ಯಾಶನ್ ಡಿಸೈನರ್ ಶರ್ಬರಿ ದತ್ತ (63) ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಇಲ್ಲಿನ ಬ್ರೋಡ್ ಸ್ಟ್ರೀಟ್‌ನಲ್ಲಿರುವ ನಿವಾಸದ ವಾಶ್ ರೂಮ್ ನಲ್ಲಿ ನಿನ್ನೆ ಸಂಜೆ ಶರ್ಬರಿ ದತ್ತ ಅವರ ಶವ ಪತ್ತೆಯಾಗಿದೆ. ಒಂಟಿಯಾಗಿ ವಾಸಿಸುತ್ತಿದ್ದ ಶರ್ಬರಿ ಪಾರ್ಶ್ವವಾಯುವಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ದತ್ತ ಬೆಳಿಗ್ಗೆಯಿಂದ ಫೋನ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಶರ್ಬರಿ ಸಾವಿಗೆ ಪಾರ್ಶ್ವವಾಯು ಕಾರಣ ಎಂದು ವೈದ್ಯರು ಪತ್ತೆ ಹಚ್ಚಿದ್ದು, ವಾಶ್‌ರೂಮ್‌ನಲ್ಲಿ ಪತ್ತೆಯಾಗಿರುವ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶರ್ಬರಿ ಕಾಲೇಜು ಶಿಕ್ಷಣ ಪೂರೈಸಿದ ಬಳಿಕ ಫ್ಯಾಶನ್ ಡಿಸೈನ್‌ನಲ್ಲಿ ಒಲವು ತೋರಿದ್ದರು. ಶರ್ಬರಿ ಅವರ ಸಾವಿನ ಸುದ್ದಿ ಕೇಳಿ ಗಾಯಕರಾದ ಪರಮ ಬ್ಯಾನರ್ಜಿ ಹಾಗೂ ಉಜ್ಜೈನ್ ಮುಖರ್ಜಿ, ನಟರಾದ ಸ್ರಬಾಂತಿ ಚಟರ್ಜಿ, ರುಕ್ಮಿಣಿ ಮೊಐತ್ರಾ ಹಾಗೂ ಪುರ್ಜಾನಿ ಘೋಷ್, ರಂಗಭೂಮಿ ನಿರ್ದೇಶಕ ದೇಬೆಶ್ ಚಟರ್ಜಿ ಮತ್ತಿತತರು ಆಘಾತ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: