ಪ್ರಮುಖ ಸುದ್ದಿ

ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ದೇಗುಲದ ಬಾಗಿಲು ಮುರಿದು ಹುಂಡಿ ಕದ್ದೊಯ್ದ ಕಳ್ಳರು

ರಾಜ್ಯ(ಮಂಡ್ಯ)ಸೆ.18:- ಸಕ್ಕರೆನಾಡು ಮಂಡ್ಯದಲ್ಲಿ ದೇಗುಲಗಳ ದರೋಡೆ ಪ್ರಕರಣ ನಿಲ್ಲುವಂತೆ ಕಾಣುತ್ತಿಲ್ಲ. ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ತಡರಾತ್ರಿ ದೇಗುಲದ ಬಾಗಿಲು ಮುರಿದ ದುಷ್ಕರ್ಮಿಗಳು ದರೋಡೆ ನಡೆಸಿದ್ದಾರೆ.
ಗ್ರಾಮದ ಆಂಜನೇಯ ಸ್ವಾಮಿ ದೇಗುಲದ ಬಾಗಿಲು ಮುರಿದು ದರೋಡೆ ನಡೆಸಿದ ಕಳ್ಳರು ದೇಗುಲದ ಗ್ರಿಲ್ ಬಾಗಿಲು ಮುರಿದು ದೇವಾಲಯದ ಒಳಗಿದ್ದ ಹುಂಡಿ ಹೊತ್ತೊಯ್ದಿದ್ದಾರೆ. ದುಷ್ಕರ್ಮಿಗಳ ದರೋಡೆ ಕೃತ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ನಾಲ್ಕೈದು ಜನರ ತಂಡದಿಂದ ದೇಗುಲದ ದರೋಡೆ ಕೃತ್ಯ ನಡೆದಿದೆ. ಕಳೆದ ವಾರವಷ್ಟೇ ಮಂಡ್ಯದಲ್ಲಿ ಮೂವರು ಅರ್ಚಕರನ್ನು ಕೊಂದು ದೇಗುಲ ದರೋಡೆ ಮಾಡಿದ ಪ್ರಕರಣ ನಡೆದಿತ್ತು. ಇದಲ್ಲದೆ ಜಿಲ್ಲೆಯ ಹಲವಾರು ಕಡೆ ದೇಗುಲಗಳ ದರೋಡೆ ಪ್ರಕರಣ ನಡೆಯುತ್ತಿದೆ. ದೇಗುಲಗಳನ್ನು ಟಾರ್ಗೆಟ್ ಮಾಡಿ ದರೋಡೆ ಮಾಡೋ ತಂಡ ಜಿಲ್ಲೆಯಲ್ಲಿ ಬೀಡು ಬಿಟ್ಟಿರೋ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: