
ಮೈಸೂರು
ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ನೂತನ ಲಾಂಛನ ಬಿಡುಗಡೆ
ಮೈಸೂರು,ಸೆ.18:- ಮೈಸೂರು ರತ್ನ ಡಾ. ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ವಿಷ್ಣು ಅಭಿಮಾನಿಗಳ ಬಳಗದ ವತಿಯಿಂದ ನೂತನ ಲಾಂಛನ ಬಿಡುಗಡೆ ಕಾರ್ಯಕ್ರಮವನ್ನು ಮೀಡಿಯಾ ಟಿವಿ ಸಂಸ್ಥಾಪಕರಾದ ನಂಜುಂಡಸ್ವಾಮಿ ಅವರು ಇಂದು ಮೀಡಿಯಾ ಟಿವಿ ಕಛೇರಿಯಲ್ಲಿ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ವಿಷ್ಣುವರ್ಧನ್ ಅವರಿಗೆ ಮೈಸೂರುರತ್ನ ಪ್ರಶಸ್ತಿಯನ್ನು ನೀಡಿದ್ದ ದಿ.ನ.ನಾಗಲಿಂಗಸ್ವಾಮಿ ಅವರ ಪುತ್ರ ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷರಾದ ತೇಜಸ್ವಿ ಕುಮಾರ್ ಪಾಟೀಲ್ ಅಧ್ಯಕ್ಷತೆಯನ್ನು ವಹಿಸಿದ್ದರು
ಈ ಸಂದರ್ಭದಲ್ಲಿ ಕನ್ನಡ ಸೇನೆಯ ಹುಣಸೂರು ತಾಲೂಕು ಅಧ್ಯಕ್ಷರಾದ ಸಿದ್ದಲಿಂಗಮೂರ್ತಿ,ಕಲಾವಿದರಾದ ಪುರುಷೋತ್ತಮ್.ಜೈ ಕರುನಾಡು ವೇದಿಕೆಯ ಮೈಸೂರು ಜಿಲ್ಲಾಧ್ಯಕ್ಷರು,ನಿರ್ದೇಶಕರಾದ ಭಯಾನಕ ನಾಗ,ಯುವ ಮುಖಂಡರಾದ ಧನಂಜಯ್,ವಿಷ್ಣು ಅಭಿಮಾನಿಗಳ ಬಳಗದ ಅಧ್ಯಕ್ಷರಾದ ನಾಗರಾಜ್.ಎಂ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)