ಮೈಸೂರು

6ಕೋಟಿ ಸ್ವತ್ತು ವಶಪಡಿಸಿಕೊಂಡ ಮುಡಾ

ಮೈಸೂರು,ಸೆ.18:-ಮೈಸೂರು ತಾಲೂಕು ಕಸಬಾ ಹೋಬಳಿ ಬೆಲವತ್ತ ಗ್ರಾಮ ಸರ್ವೆ ನಂಬರ್ 87/2ರಲ್ಲಿ ಹೊರವರ್ತುಲ ರಸ್ತೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ಹತ್ತಿರ ಸುಮಾರು 8 ½ ಗುಂಟೆ ಜಮೀನಿನಲ್ಲಿ ಅನಧಿಕೃತವಾಗಿ ಶೆಡ್ ನ್ನು ನಿರ್ಮಿಸಿದ್ದು ಇದರ ಅಂದಾಜು ಮೌಲ್ಯ ಸುಮಾರು 6.00ಕೋಟಿಗಳಾಗಿರುತ್ತದೆ.
ಈ ಸ್ವತ್ತಿನಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಶೆಡ್ಡನ್ನು ಆಯುಕ್ತರ ನಿರ್ದೇಶನದಂತೆ ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆದು ನಾಮಫಲಕವನ್ನು ಅಳವಡಿಸಲಾಗಿದೆ.
ಈ ಸಂದರ್ಭ ವಲಯ ಅಧಿಕಾರಿ ನರೇಂದ್ರ ಬಾಬು, ಸಹಾಯಕ ಅಭಿಯಂತರರಾದ ಮಣಿ ಹಾಗೂ ಭೂ ಮಾಪಕರಾದ ಕಾವೇರಿ ಗೌಡ ಹಾಗೂ ಸಿಬ್ಬಂದಿಗಳು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: