ಪ್ರಮುಖ ಸುದ್ದಿ

ಮಧ್ಯಾಹ್ನ ಕಾಣೆಯಾದ ಪೇಟಿಎಂ ಆ್ಯಪ್ ಸಂಜೆಯ ವೇಳೆ ಮತ್ತೆ ಪ್ರತ್ಯಕ್ಷ!


ದೇಶ(ನವದೆಹಲಿ)ಸೆ.18:- ಪೇಮೆಂಟ್ ಆ್ಯಪ್ ಪೇಟಿಎಂ ಅಚ್ಚರಿ ಎಂಬಂತೆ ಗೂಗಲ್ ಪ್ಲೇ ಸ್ಟೋರ್ ನಿಂದ ಮಧ್ಯಾಹ್ನದ ವೇಳೆ ಕಣ್ಮರೆಯಾಗಿತ್ತು. ಇದೀಗ ಮತ್ತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅಪ್ ಡೇಟ್ & ವಿ ಆರ್ ಬ್ಯಾಕ್ ! ಎಂದು ಪೇಟಿಎಂ ಟ್ವೀಟ್‌ ಮಾಡಿದೆ.

ವನ್ 97 ಕಮ್ಯುನಿಕೇಷನ್ ಲಿಮಿಟೆಡ್ ಪೇಟಿಎಂ ಮಾಲಿಕತ್ವವನ್ನು ಹೊಂದಿದ್ದು, ಬೆಳಗ್ಗೆ ತನ್ನ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ರಿಮೂವ್ ಮಾಡಲಾಗಿತ್ತು.

ಈ ಕುರಿತು ಟ್ವೀಟರ್ ನಲ್ಲಿ ಸ್ಪಷ್ಟನೆ ನೀಡಿದ ಪೇಟಿಎಂ “ಪೇಟಿಎಂ ಆಂಡ್ರಾಯ್ಡ್ ಆ್ಯಪ್ ತಾತ್ಕಲಿಕವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ. ಮಾತ್ರವಲ್ಲದೆ ಯಾವುದೇ ಹೊಸ ಅಪ್ ಡೆಟ್ ಗಳು ಕೂಡ ದೊರಕುವುದಿಲ್ಲ. ಶೀಘ್ರದಲ್ಲಿ ವಾಪಾಸಾಗುತ್ತೇವೆ. ನಿಮ್ಮ ಎಲ್ಲಾ ಪಾವತಿ ಸೇವೆಗಳು ಸಂಪೂರ್ಣ ಭದ್ರವಾಗಿದೆ’ ಎಂದಿತ್ತು.
ಅದರಂತೆ ಈಗ ಮತ್ತೆ ಮರಳಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: