ಮೈಸೂರು

ಜನನಿ ಟ್ರಸ್ಟ್ ವತಿಯಿಂದ ಆಟೋ ಚಾಲಕರಿಗೆ ಬಾಂಡ್ ವಿತರಣೆ

ಮೈಸೂರು, ಸೆ.19:- ಜನನಿ ಸೇವಾ ಟ್ರಸ್ಟ್ (ರಿ) ವತಿಯಿಂದ 50 ಜನ ಆಟೋ ಚಾಲಕರಿಗೆ 1 ಲಕ್ಷ ಮೌಲ್ಯದ ಅಪಘಾತ ವಿಮೆ ಬಾಂಡ್ ವಿತರಿಸಲಾಯಿತು.
ಮಹಾರಾಜ ಪೆವಿಲಿಯನ್ ಮೈದಾನದಲ್ಲಿ ಆಟೋ ಚಾಲಕರಿಗೆ 50 ಜನ ಆಟೋ ಚಾಲಕರಿಗೆ 1 ಲಕ್ಷ ಮೌಲ್ಯದ ಅಪಘಾತ ವಿಮೆ ಬಾಂಡ್ ವಿತರಿಸಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕರಾದ ಎಂಕೆ ಸೋಮಶೇಖರ್
ಮೈಸೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಮಹಾಮಾರಿ ಕೊರೊನಾ ಅದನ್ನು ಅರಿತು ಜನನಿ ಸೇವಾ ಟ್ರಸ್ಟ ನವರು ಆಟೊ ಚಾಲಕರಿಗೆ ಉಚಿತವಾಗಿ ನೀಡುತ್ತಿರುವುದು ಅದರಲ್ಲೂ ಕಡು ಬಡವರಿಗೆ ವಿಮೆ ಮಾಡಿಸುತ್ತಿರುವುದು ಉತ್ತಮ ಕೆಲಸ ಪ್ರತಿಯೊಬ್ಬರು ಆರೋಗ್ಯದಲ್ಲಿ ಇದ್ದಾಗಲೇ ವಿಮೆ ಮಾಡಿಸಿ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು ಕೆಲವು ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆ ನೆಪದಲ್ಲಿ ಜನರಿಂದ ಹೆಚ್ಚು ಶುಲ್ಕ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು ಎಂದರು.
‘ದೇಶದಲ್ಲಿ ದಿನೇ ದಿನೇ ಕೋವಿಡ್‌–19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕು ತಡೆಗೆ ಸರ್ಕಾರ ವಿಫಲವಾಗಿದು , ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಸೋಂಕಿತರಿಂದ ಹೆಚ್ಚು ಶುಲ್ಕ ವಸೂಲು ಮಾಡುತ್ತಿವೆ. ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಅವರು ಈ ಬಗ್ಗೆ ಗಮನ ಹರಿಸಬೇಕು. ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸಿದ ಮಾಜಿ ನಗರಪಾಲಿಕೆ ಸದಸ್ಯರಾದ ಡಾ ಎಂಕೆ ಅಶೋಕ್ ಅವರ ಜನ್ಮ ದಿನಾಚರಣೆಯನ್ನು ವಿಶಿಷ್ಟವಾಗಿ ಸಾಮಾಜಿಕ ಸೇವೆ ಮಾಡುವ ಮುಖೇನ ವಿಶೇಷವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ನಗರಪಾಲಿಕೆ ಸದಸ್ಯರು ಹಾಗೂ ಜನನಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಡಾ ಎಂ ಕೆ ಅಶೋಕ್. ಇಲೈ ಆಳ್ವಾರ್ ಸ್ವಾಮೀಜಿ , ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷರಾದ ಆರ್. ಮೂರ್ತಿ ,ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಸದಸ್ಯರಾದ ಟಿ.ಎಸ್. ರವಿಶಂಕರ್, ಕೆ ಹರೀಶ್ ಗೌಡ, ಡಾ.ರಘುರಾಮ್ ವಾಜಪೇಯಿ, ಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೆ. ಪುಟ್ಟಸ್ವಾಮಿ, ಶ್ರೀನಿವಾಸ್ ಮಿತ್ರ ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: