ಮೈಸೂರು

ವಶಪಡಿಸಿಕೊಂಡ ಅಕ್ರಮ ಮದ್ಯ ನಾಶ

ಮೈಸೂರು,ಸೆ.20:- ವಿವಿಧ ಪ್ರಕರಣಗಳಡಿಯಲ್ಲಿ ಅಬಕಾರಿ ಅಧಿಕಾರಿಗಳು 2018 ಮತ್ತು 19 ನೇ ಸಾಲಿನಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ಭಾನುವಾರ ನಾಶಪಡಿಸಿದರು.

ತಿ.ನರಸೀಪುರ ಅಬಕಾರಿ ಅಧಿಕಾರಿಗಳು ಒಟ್ಟು 168ಪ್ರಕರಣಗಳಲ್ಲಿ ಅಕ್ರಮ ಮಧ್ಯವನ್ನು ವಶಪಡಿಸಿಕೊಂಡಿದ್ದರು. ನಂಜನಗೂಡು ಅಬಕಾರಿ ಉಪವಿಭಾಗದ ಉಪ ಅಧೀಕ್ಷಕ ಎಂ.ಡಿ ಮೋಹನ್ ಕುಮಾರ್ ನೇತೃತ್ವದಲ್ಲಿ ಸರ್ಕಾರದ ಆದೇಶದಂತೆ ಅಕ್ರಮ ಮದ್ಯವನ್ನು ತಮ್ಮ ಸುಪರ್ದಿಗೆ ತಗೆದುಕೊಂಡು ನಾಶಪಡಿಸಿದರು.

ಈ ವೇಳೆ ತಿ.ನರಸೀಪುರ ವಲಯ ನಿರೀಕ್ಷಕ ರಾಜೇಶ್, ಶಿರಸ್ತೇದಾರ್ ಪ್ರಭುರಾಜ್, ಸಿಬ್ಬಂದಿಗಳಾದ ಪರಶಿವಮೂರ್ತಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: