ಮೈಸೂರು

ಆಧುನಿಕ ಶ್ರವಣಕುಮಾರ ಕೃಷ್ಣಕುಮಾರ್ ಮತ್ತವರ ತಾಯಿಯನ್ನು ಅಭಿನಂದಿಸಿದ ಡಿಟಿಹೆಚ್ ಫೌಂಡೇಷನ್

ಮೈಸೂರು,ಸೆ.20:- ತಾಯಿಗಾಗಿ 56 ಸಾವಿರ ಕಿ.ಮೀ.ಮಾತೃ ಸೇವಾ ಸಂಕಲ್ಪ ಯಾತ್ರೆ ಮಾಡಿ 4 ದೇಶ ಎರಡೂವರೆ ವರ್ಷ ಪ್ರವಾಸ ಮುಗಿಸಿ ಮೈಸೂರಿಗೆ ಹಿಂದಿರುಗಿದ ಆಧುನಿಕ ಶ್ರವಣಕುಮಾರ ಎಂದೇ ಖ್ಯಾತರಾದ ಕೃಷ್ಣಕುಮಾರ್ ಹಾಗೂ ಅವರ ತಾಯಿ ಚೂಡಾ ರತ್ನ ಅವರಿಗೆ ಡಿಟಿಎಸ್ ಫೌಂಡೇಷನ್ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಟಿ ಕೆ ಲೇಔಟ್ ನಲ್ಲಿರುವ ಕೃಷ್ಣಧಾಮದಲ್ಲಿ ಅಭಿನಂದಿಸಲಾಯಿತು.
ಅಭಿನಂದಿಸಿ ಮಾತನಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ ರಾಜೀವ್
ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಯರನ್ನು ಕಡೆಗಣಿಸಿ ವಿದೇಶೀ ಸಂಸ್ಕೃತಿಯತ್ತ ಮಾರುಹೋಗುತ್ತಿರುವ ಯುವ ಜನತೆಯು ಇಂತಹಾ ಮಕ್ಕಳಿಂದ ಪಾಠ ಕಲಿಯಬೇಕಿದೆ. ಕೇವಲ ಹಣ ಸಂಪಾದನೆ ಮಾಡಲು ಹೋಗಿ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಈ ಕಾಲದಲ್ಲಿ ಕೃಷ್ಣಕುಮಾರ್ ಅವರ ಕಾರ್ಯ ಆದರ್ಶವಾದದ್ದು ಎಂದರು. ಇದೇ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಎಚ್ ವಿ ರಾಜೀವ್ ,ಡಿಪಿಎಸ್ ಫೌಂಡೇಶನ್ ಅಧ್ಯಕ್ಷರಾದ ಡಿಟಿ ಪ್ರಕಾಶ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್ ,ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್, ಜಯಸಿಂಹ ,ರಾಕೇಶ್ ಭಟ್, ಚಕ್ರಪಾಣಿ ,ಸುಚೀಂದ್ರ, ಪ್ರಶಾಂತ್, ಶ್ರೀಕಾಂತ್ ಕಶ್ಯಪ್ ,ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: