ಪ್ರಮುಖ ಸುದ್ದಿ

ಅಪರಿಚಿತ ವಾಹನ ಗುದ್ದಿ ಚಿರತೆ ಸಾವು

ರಾಜ್ಯ( ಕೋಲಾರ)ಸೆ.21:- ಜಿಲ್ಲೆ ಮತ್ತು ತಾಲ್ಲೂಕಿನ ಕೋಲಾರ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪರಿಚಿತ ವಾಹನ ಗುದ್ದಿ ಚಿರತೆಯೊಂದು ಸಾವಿಗೀಡಾಗಿರುವ ಘಟನೆ ನಡೆದೆ.

ಈ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ75ರ ಕೊಂಡರಾಜನಹಳ್ಳಿ ಪಂಪ್ ಹೌಸ್ ಸಮೀಪ ಅಪರಿಚಿತ ವಾಹನ ಚಿರತೆಗೆ ಗುದ್ದಿದೆ, ಅಪಘಾತದ ರಭಸಕ್ಕೆ ಸ್ಥಳದಲ್ಲೇ ಚಿರತೆ ಸಾವನ್ನಪ್ಪಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಾಹನ ಚಲಿಸುವಾಗ ಮುಂದಿನ ಪೀಳಿಗೆಗಾಗಿ ಪ್ರಾಣಿಗಳನ್ನು ಉಳಿಸಿ ವಾಹನವನ್ನು ನಿಧಾನವಾಗಿ ಚಲಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: