ಮೈಸೂರು

ವೃದ್ಧ ದಂಪತಿಗಳನ್ನು ಹೆದರಿಸಿ ಮನೆ ದರೋಡೆ ಮಾಡಿದ್ದ ಐದು ಮಂದಿಯ ಬಂಧನ : 12ಲಕ್ಷರೂ.ಮೌಲ್ಯದ ಚಿನ್ನಾಭರಣ ವಶ

ಮೈಸೂರು,ಸೆ.21:- ವೃದ್ಧ ದಂಪತಿಗಳನ್ನು ಹೆದರಿಸಿ ಮನೆ ದರೋಡೆ ಮಾಡಿದ್ದ ಐದು ಮಂದಿಯನ್ನು ಬಂಧಿಸುವಲ್ಲಿ ದೇವರಾಜ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು ಬಂಧಿತರಿಂದ 12.00.000 ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಸೆ.17ರಂದು ಪಿಎಸ್ ಐ ಎಸ್.ರಾಜು ಅವರು ಗರುಡಾ ವಾಹನದಲ್ಲಿ ಗಸ್ತಿನಲ್ಲಿದ್ದಾಗ ಸಂಜೆ 4ಗಂಟೆಯ ವೇಳೆ ಯಾರೋ ಐದು ಮಂದಿ ಆಟೋದಲ್ಲಿ ಬಂದು ವಿನೋಬ ರಸ್ತೆಯ ಶಿವಾಯ ನಮಃ ಮಠ ರಸ್ತೆಯಲ್ಲಿ ಒಂದು ಚಿನ್ನದ ಚೈನ್ ಮಾರಾಟ ಮಾಡಲು ಪ್ರಯತ್ನಿಸುತಿರುವುದಾಗಿ ಮಾಹಿತಿ ನೀಡಿದ್ದು, ಪಿಎಸ್ ಐ ರಾಜು ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇಬ್ಬರು ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬಂದಿತ್ತು. ಮತ್ತೆ ಮೂರು ಮಂದಿ ಆಟೋ ಬಳಿ ನಿಂತಿದ್ದರು. ಇವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಜಜೀ ಎಂಬವನ ಬಳಿ ಎರಡು ಎಳೆಯ ಮಾಂಗಲ್ಯ ಚೈನ್ ಇರುವುದು ಕಂಡು ಬಂದಿತ್ತು. ವಿಚಾರಣೆ ಮಾಡಲಾಗಿ ಸರಿಯಾಗಿ ಮಾಹಿತಿ ನೀಡಲಿಲ್ಲ. ಠಾಣೆಗೆ ಕರೆತಂದು ವಿಚಾರಿಸಲಾಗಿ ಹದಿನೈದು ದಿನಗಳ ಹಿಂದೆ ಮೈಸೂರಿನ ಮನೆಯೊಂದರಲ್ಲಿ ಇದ್ದ ವಯಸ್ಸಾದ ದಂಪತಿಯನ್ನು ಹೆದರಿಸಿ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತರನ್ನು ಸಾತಗಳ್ಳಿ ಬಸ್ ಡಿಪೋ ಹಿಂಬದಿ ನಿವಾಸಿ ಆಟೋ ಚಾಲಕ ಜಬೀವುಲ್ಲಾ ಷರೀಫ್@ಜಬೀ ಬಿನ್ ಲೇಟ್ ರೆಹಮನ್ ಷರೀಫ್(27) ಸುನ್ನಿ ಮುಸ್ಲಿಂ, ಉದಯಗಿರಿ ನಿವಾಸಿ, ಬಟ್ಟೆ ವ್ಯಾಪಾರಿ ಇಬ್ರಾಹಿಂ ಅಹ್ಮದ್ ಅಲಿಯಾಸ್ ಷಜ್ಜಾದ್ ಬಿನ್ ರಫೀಕ್ ಅಹಮದ್(24) ಸುನ್ನಿ ಮುಸ್ಲಿಂ, ಗೌಸಿಯಾನಗರ ನಿವಾಸಿ ಬಟ್ಟೆ ವ್ಯಾಪಾರಿ ಖಾಸಿಫ್ ಬಿನ್ಅನ್ವರ್ ಪಾಷಾ(22) ಸುನ್ನಿ ಮುಸ್ಲಿಂ, ಹಾಸನ ಜಿಲ್ಲೆ ಗುಡ್ಡಯ್ಯನಹಳ್ಳಿ ಕೊಪ್ಪಲು ಗ್ರಾಮದ ನಿವಾಸಿ, ಚಾಲಕ ವೃತ್ತಿಯಲ್ಲಿರುವ ಹಾಲಿ ಮೈಸೂರು ಗಿರಿ ಬೋವಿ ಪಾಳ್ಯ ನಿವಾಸಿ ಗವೀಗೌಡ ಅಲಿಯಾಸ್ ಸುರೇಶ್ ಬಿನ್ ರಂಗೇಗೌಡ(42), ಹುಣಸೂರು ತಾಲೂಕು ನಿವಾಸಿ, ಹಾಲಿ ಮೈಸೂರು ವಿವೇಕಾನಂದ ನಗರ ನಿವಾಸಿ ಬ್ರೋಕರ್ ಕೆಲಸ ಮಾಡುವ ಗಿರೀಶ್ ಬಿ.ಎಸ್, ಬಿನ್ ಲೇಟ್ ಶಿವನಂಜಪ್ಪ(52) ಎಂದು ಹೇಳಲಾಗಿದ್ದು, ಈ ಐವರು ವಯಸ್ಸಾದವರು ಒಂಟಿಯಾಗಿರುವ ಮನೆಗಳಲ್ಲಿ ದರೋಡೆ ಮಾಡುವ ಸಂಚು ರೂಪಿಸಿದ್ದು , ಗಿರೀಶ್ ತಮ್ಮ ಪಕ್ಕದ ಮನೆಯಲ್ಲಿ ವೃದ್ಧ ದಂಪತಿಗಳು ಮಾತ್ರ ಇದ್ದು ಬೇರೆ ಯಾರೂ ಇರಲ್ಲ ಎಂದು ಜಬೀವುಲ್ಲಾ, ಸಜ್ಜಾದ್, ಖಾಸಿಫ್ ಸುರೇಶ್ ಗೆ ತಿಳಿಸಿದ್ದ. ಅದರಂತೆ ಆ.29ರಂದು ದರೋಡೆ ನಡೆಸಿದ್ದರು. ಬಂಧಿತರಿಂದ ಟಿವಿ, ಫ್ರಿಡ್ಜ್, ಮಂಚ, ಸೋಪಾ, ವಾಶಿಂಗ್ ಮಿಷನ್ ವಶಕ್ಕೆ ಪಡೆದಿದ್ದಾರೆ. ಪತ್ತೆಕಾರ್ಯವನ್ನು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಮತ್ತು ಗೀತಾಪ್ರಸನ್ನ ಕಾರ್ಗದರ್ಶನದಲ್ಲಿ ದೇವರಾಜ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಪಿಎಸ್ ಐ ರಾಜು, ಎಎಸ್ ಐ ಉದಯ್ ಕುಮಾರ್ ಸಿಬ್ಬಂದಿಯವರಾದ ಸೋಮಶೆಟ್ಟಿ, ವೇಣುಗೋಪಾಲ್, ನಂದೀಶ್, ಪ್ರದೀಪ್, ಚಂದ್ರು, ವೀರೇಶ್ ಬಾಗೇವಾಡಿ, ನಾಗರಾಜು, ಚಾಲಕರಾದ ವಸಂತ್ ಕುಮಾರ್, ಚಂದ್ರು, ಪ್ರಕಾಶ್, ಧನಂಜಯ್ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: