ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಬಿಗ್ ಬಾಸ್ ನಾಲ್ಕರ ವಿಜೇತ ಪ್ರಥಮ್ ಆತ್ಮಹತ್ಯೆಗೆ ಯತ್ನ

ಒಳ್ಳೆಯ ಹುಡುಗ, ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲುವು  ಎಂದು ಕುಣಿದು ಕುಪ್ಪಳಿಸಿ ಚಿರಪರಿಚಿತರಾಗಿದ್ದ, ಬಿಗ್ ಬಾಸ್ ಸೀಸನ್ ನಾಲ್ಕರ ವಿಜೇತ ಪ್ರಥಮ್ ಬೆಂಗಳೂರಿನ ಬಸವೇಶ್ವರ ನಗರದ ತಮ್ಮ ಮನೆಯಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಹೀಗೊಂದು ವಿಡಿಯೋ ಫೇಸ್ ಬುಕ್ ಲ್ಲಿ ಅಪಲೋಡ್ ಆಗಿದೆ. ಅಪ್ಲೋಡ್ ಮಾಡಿದ್ದು ಬೇರಾರು ಅಲ್ಲ. ಖುದ್ದು ಪ್ರಥಮ್. ಫೇಸ್ ಬುಕ್ ಲೈವ್ ನಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದಲ್ಲಿ ಕ್ಷಮಿಸಿ. ನಾನು ಮಾನಸಿಕವಾಗಿ ತುಂಬಾನೇ ನೊಂದಿದ್ದೇನೆ. ಜೀವನ ಬೇಡ  ಎನಿಸಿದೆ. ನನ್ನ ಆತ್ಮೀಯ ಸ್ನೇಹಿತ ಲೋಕೇಶ್ ನನಗೆ ತುಂಬಾ ನೋವುಂಟು ಮಾಡಿದ್ದಾನೆ ಎಂದು ಅದರಲ್ಲಿ ಹೇಳಿಕೊಂಡಿದ್ದಾರೆ.

ನಿದ್ರೆ ಮಾತ್ರೆ ಸೇವಿಸಿದ ಅವರನ್ನು  ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ  ದಾಖಲಿಸಲಾಗಿದೆ. ಬಸವೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಸ್.ಎಚ್)

 

Leave a Reply

comments

Related Articles

error: