Uncategorized

ವ್ಯಕ್ತಿಯ ಮೇಲೆ ಮಾರಕಾಯುಧಗಳಿಂದ ಮಾರಣಾಂತಿಕ ಹಲ್ಲೆ

ಮೈಸೂರು,ಸೆ.22:- ಮೈಸೂರಿನ ಶ್ರೀರಾಂಪುರದಲ್ಲಿ ರಿಹಾಬ್ ಸೆಂಟರ್ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವನಿಗೆ ಆತನ ಚೆನ್ನಾಗಿ ಥಳಿಸಿದ ಘಟನೆ ನಡೆದಿದೆ.
ಅರುಣ ಎಂಬಾತನೇ ಏಟು ತಿಂದವನಾಗಿದ್ದು, ಈತ ಶ್ರೀರಾಂಪುರ ರಿಂಗ್ ರೋಡ್ ನಲ್ಲಿ ರಿಹಾಬ್ ಸೆಂಟರ್ ನ್ನು ಇಟ್ಟುಕೊಂಡಿದ್ದ. ಈತ ಕೆಲವು ತಿಂಗಳ ಹಿಂದೆ ಬೆಂಗಳೂರು ಮೂಲದ ಯುವತಿಯನ್ನು ವಿವಾಹವಾಗಿದ್ದ. ಪತ್ನಿಯ ಸ್ನೇಹಿತೆ ಅಶ್ವಿನಿ ಎಂಬಾಕೆ ರೌಡಿಶೀಟರ್ ಆಗಿದ್ದು, ಆಕೆ ಇವರಿಬ್ಬರನ್ನು ಬೆಂಗಳೂರಿಗೆ ಕರೆಸಿದ್ದಳು ಎನ್ನಲಾಗಿದೆ. ಬೆಂಗಳೂರಿಗೆ ತರಳಿದ ವೇಳೆ ಅರುಣ್ ಗೆ ಪತ್ನಿಯಿಂದಲೇ ಹಲ್ಲೆ ನಡೆಸಿ ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಳು. ಯಾಕೆ ವಿಡಿಯೋ ಅಪ್ ಲೋಡ್ ಮಾಡಿದ್ದೀರಿ ಎಂದು ಪ್ರಶ್ನಿಸಿದ ಅರುಣ್ ಮೇಲೆ ಯುವಕರ ಗುಂಪು ಮಾರಕಾಯುಧಗಳಿಂದ ದಾಳಿ ನಡೆಸಿದೆ.
ಗಂಭೀರವಾಗಿ ಗಾಯಗೊಂಡಿರುವ ಅರುಣ್ ನನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, 80ಹೊಲಿಗೆ ಹಾಕಿದ್ದಾರೆನ್ನಲಾಗಿದೆ. ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: