ಕರ್ನಾಟಕಪ್ರಮುಖ ಸುದ್ದಿ

ಡಿಜೆ ಹಳ್ಳಿ ಗಲಭೆ ಪ್ರಕರಣ: ತನಿಖೆ ಕೈಗೆತ್ತಿಕೊಂಡು ಎರಡು ಪ್ರತ್ಯೇಕ ಕೇಸ್ ದಾಖಲಿಸಿದ ಐಎನ್ಎ

ಬೆಂಗಳೂರು,ಸೆ.22-ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ (ಐಎನ್ಎ) ಎರಡು ಪ್ರತ್ಯೇಕ ಕೇಸ್ ದಾಖಲಿಸಿಕೊಂಡಿದೆ.

ಪೊಲೀಸ್‌ ರಿಪೋರ್ಟ್‌ ಹಾಗೂ ರಾಜ್ಯ ಸರಕಾರದ ಶಿಫಾರಸು ಹಿನ್ನೆಲೆ ಕೇಂದ್ರ ಗೃಹ ಇಲಾಖೆ ಎನ್‌ಐಎ ಪ್ರಕರಣದ ತನಿಖೆ ನಡೆಸುವಂತೆ ಸೋಮವಾರ ಆದೇಶಿಸಿತ್ತು. ಅದರಂತೆ ಐಎನ್ಎ ತನಿಖೆಯನ್ನು ಕೈಗೆತ್ತಿಕೊಂಡಿದೆ. ಎರಡು ಪ್ರತ್ಯೇಕ ಕೇಸ್ ನಲ್ಲಿ ಹಲವು ಆರೋಪಿಗಳ ಹೆಸರು ಹಾಗೂ ಕುಕೃತ್ಯ ನಡೆಸಿದ ರೀತಿಯ ಬಗ್ಗೆ ವಿವರಿಸಿಕೊಂಡಿದೆ.

ಎನ್‌ಐಎ ಜೈಲಿನಲ್ಲಿರುವ ಆರೋಪಿಗಳನ್ನು ವಿಚಾರಿಸಲಿದೆ. ಸ್ಥಳ ಪರಿಶೀಲನೆ, ಸಿಸಿಟಿವಿ ಪರಿಶೀಲನೆ ಸೇರಿ ಎಲ್ಲಾ ಆಯಾಮಗಳಲ್ಲಿಯೂ ವಿಚಾರಣೆ ನಡೆಸಲಿದೆ. ಅಲ್ಲದೆ ಕೊರೊನಾದಿಂದ ಗುಣಮುಖರಾದ ಮಾಜಿ ಮೇಯರ್‌ ಸಂಪತ್‌ ರಾಜ್‌ ಅವರನ್ನು ಕೂಡ ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.

ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಸಂಬಂಧಿ ನವೀನ್‌ ಎಂಬಾತ ಧರ್ಮದ ಬಗ್ಗೆ ಧಕ್ಕೆ ತರುವಂತ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ ಎಂದು ಆರೋಪಿಸಿ, ಹಲವು ಯುವಕರು ಸಂಘಟಿತರಾಗಿ ಶ್ರೀನಿವಾಸ್‌ ಮನೆ, ನವೀನ್‌ ಮನೆಯನ್ನು ಧ್ವಂಸಗೊಳಿಸಿದ್ದರು. ರಸ್ತೆಯಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಾಕಿದ್ದರು. ಡಿಜೆ ಹಳ್ಳಿಯ ಪೊಲೀಸ್‌ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಘಟನೆಗೆ ಸಂಬಂಧಪಟ್ಟಂತೆ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಇಪ್ಪತ್ತಕ್ಕೂ ಅಧಿಕ ಮಂದಿ ಜೈಲಿನಲ್ಲಿದ್ದಾರೆ. ಇನ್ನು ಈ ಗಲಭೆಯ ಹಿಂದೆ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನಗಳ ಕೈವಾಡವಿದೆ ಎನ್ನುವ ಆರೋಪವು ಇದೆ. (ಎಂ.ಎನ್)

Leave a Reply

comments

Related Articles

error: