ಮೈಸೂರು

ಪೈಲ್ವಾನ್ ಮಹದೇವು ಕಾಂಗ್ರೆಸ್ ಸೇರ್ಪಡೆ

ನಂಜನಗೂಡಿನ ಕಳಲೆಗ್ರಾಮದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಪೈಲ್ವಾನ್ ಮಹದೇವು ಇದೀಗ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಸೋಮವಾರದವರೆಗೂ ಬಿಜೆಪಿಯಲ್ಲೇ ಗುರುತಿಸಿಕೊಂಡಿದ್ದ ಮಹದೇವು ಇದೀಗ ಕಾಂಗ್ರೆಸ್ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮಂಗಳವಾರ ಅಧಿಕೃತವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಧ್ರುವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಕಾಂಗ್ರೆಸ್ ಸೇರಿದ ಅವರನ್ನು ಪಕ್ಷದ ಶಾಲು ಹೊದೆಸಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಶಿವಣ್ಣ, ದೇಸಿಗೌಡ ಉಪಸ್ಥಿತರಿದ್ದರು.

Leave a Reply

comments

Related Articles

error: