ಮೈಸೂರು

ಅಶೋಕಪುರಂ ನ ಭಾಗದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ

ಮೈಸೂರು,ಸೆ.23:- ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಶೋಕಪುರಂ ನ ಭಾಗದಲ್ಲಿ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅವರ ನೇತೃತ್ವದಲ್ಲಿ ಕೆಪಿಸಿಸಿ ಪ್ರಾಯೋಜಿತ “ಆರೋಗ್ಯ ಹಸ್ತ” ಕಾರ್ಯಕ್ರಮದಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಪ್ರಭುಮೂರ್ತಿ,ಕಾಂಗ್ರೆಸ್ ಮುಖಂಡರಾದ ಜೋಗಿಮಹೇಶ್,ಬ್ಲಾಕ್ ಅಧ್ಯಕ್ಷರುಗಳಾದ ಶ್ರೀಧರ್,ಜಿ ಸೋಮಶೇಖರ್ ,ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನೀಲ್,ಪರಶುರಾಮ್,ಗುಣಶೇಖರ್ ,ಮಂಜು,ಕಬಡ್ಡಿ ಶಂಕರ್,ಪೈಲ್ವಾನ್ ಕೃಷ್ಣ ,ಮಾಧ್ಯಮ ವಕ್ತಾರ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: