ಮೈಸೂರು

ಶ್ರೀರಾಮ ನವಮಿ ಆಚರಣೆ

ದೇಶಾದ್ಯಂತ ರಾಮನವಮಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಸಂತ ಋತುವಿನಲ್ಲಿ ಆಗಮಿಸುವ ಈ ಹಬ್ಬವು ಶ್ರೀರಾಮನ ಜನ್ಮದಿನವಾಗಿ ಪ್ರಸಿದ್ಧವಾಗಿದೆ.

ವಿಷ್ಣುವಿನ ಏಳನೇ ಅವತಾರವಿದೆಂದು ಹೇಳಲಾಗುತ್ತಿದ್ದು  ಚೈತ್ರ ಶುಕ್ಲ ನವಮಿಯನ್ನು ರಾಮನವಮಿ ಎಂದು ಕರೆಯಲಾಗುತ್ತಿದ್ದು, ಅನೇಕ ರಾಮಮಂದಿರಗಳಲ್ಲಿ ಚೈತ್ರ ಶುಕ್ಲ ಪಾಡ್ಯದಿಂದ ಒಂಭತ್ತು ದಿನಗಳ ಕಾಲ ರಾಮನವಮಿ ಉತ್ಸವವು ನಡೆಯುತ್ತದೆ.

ಶ್ರೀರಾಮನು ಆದರ್ಶ ಪುತ್ರನಾಗಿ, ಧರ್ಮಪಾಲಕನಾಗಿ, ಮರ್ಯಾದಾ ಪುರುಷೋತ್ತಮನಾಗಿ ಗುರುತಿಸಿಕೊಂಡಿದ್ದಾನೆ. ಈ ದಿನವನ್ನು ಎಲ್ಲೆಡೆಯೂ ಶ್ರದ್ಧಾಭಕ್ತಿಗಳಿಂದ ಶ್ರೀರಾಮನನ್ನು ಪೂಜಿಸಲಾಗುತ್ತಿದ್ದು, ಮೈಸೂರಿನ ಹಲವು ದೇವಾಲಯಗಳಲ್ಲಿಯೂ ಶ್ರೀರಾಮನಿಗೆ ವಿಶೇಷ ಪೂಜಾದಿ ಕೈಕಂರ್ಯಗಳು ನಡೆದವು. ಬೆಳಿಗ್ಗಿನಿಂದಲೇ ದೇವಾಲಯಗಳಲ್ಲಿ ರಾಮನ ಕುರಿತಾದ ಮಂತ್ರಘೋಷಗಳು, ಭಕ್ತಿಗೀತೆಗಳು ಮೊಳಗಿದವು.

ದೇವಾಲಯಗಳಿಗೆ ಆಗಮಿಸಿದ ಸಹಸ್ರಾರು ಭಕ್ತರು ಭಕ್ತಿಭಾವಗಳಿಂದ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಗಳಲ್ಲಿ ಪಾನಕ, ಕೋಸಂಬರಿಗಳ ವಿತರಣೆ ನಡೆಯಿತು. (ಎಸ್.ಎಚ್)

Leave a Reply

comments

Related Articles

error: