ಮೈಸೂರು

‘ಫಿಟ್ ಮೈಸೂರು’ ಎಂಬ ಹೊಸ ಸಂಕಲ್ಪದೊಂದಿಗೆ ವಿನೂತನ ಕಾರ್ಯಕ್ರಮ

ಮೈಸೂರು,ಸೆ.23- ಫಿಟ್ ಇಂಡಿಯಾ ಯೋಜನೆಯಡಿ ‘ಫಿಟ್ ಮೈಸೂರು’ ಎಂಬ ಹೊಸ ಸಂಕಲ್ಪದೊಂದಿಗೆ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಜಿಮ್ ಮತ್ತು ಫಿಟ್ ನೆಸ್ ಮಾಲೀಕರ ಸಂಘದ ಪದಾಧಿಕಾರಿಗಳು ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎಸ್ ಹರ್ಷ ಕೋವಿಡ್ ಮಹಾಮಾರಿಯಿಂದಾಗಿ ಜಿಮ್ ಮತ್ತು ಫಿಟ್ ನೆಸ್ ಉದ್ಯಮವು ತುಂಬಾ ನೀರಸವಾಗಿ ನಡೆಯುತ್ತಿದ್ದು,ಇದನ್ನೇ ಮುಖ್ಯ ಕಸುಬನ್ನಾಗಿಸಿಕೊಂಡಿದ್ದ ಸುಮಾರು ಕುಟುಂಬಗಳು ಬೀದಿಗೆ ಬಂದಿದೆ. ಅಲ್ಲದೇ ಸ್ಥಿತಿ ಶೋಚನೀಯವಾಗಿದ್ದು,ಹಲವು ಬಾರಿ ನೆರವಿಗಾಗಿ ಮನವಿ ಮಾಡಿದರೂ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತೋರಿದೆ ಎಂದು ಅಳಲು ತೋಡಿಕೊಂಡರು.
ಈ ನಡುವೆ ಜಿಮ್ ಮತ್ತು ಫಿಟ್ನೆಸ್ ಉದ್ಯಮದ ಚೇತರಿಕೆಗಾಗಿ ಪ್ರಸ್ತುತ ಫಿಟ್ ಮೈಸೂರು ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಂಘದ ವ್ಯಾಪ್ತಿಗೆ ಬರುವ ಎಲ್ಲಾ ಫಿಟ್ ನೆಸ್ ಕೇಂದ್ರ ಮತ್ತು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಮ್ ಮತ್ತು ಫಿಟ್ ನೆಸ್ ಸೆಂಟರ್ ಗಳಲ್ಲಿ ನಗರದ ಆಸಕ್ತ ಜನತೆ 3 ದಿನ ಉಚಿತವಾಗಿ ಪ್ರವೇಶವನ್ನು ಪಡೆಯಬಹುದು. ಈ ಉಚಿತ ತರಬೇತಿ ನೀಡುವುದರ ಮುಖಾಂತರ ಜನರಲ್ಲಿ ಫಿಟ್ನೆಸ್ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಿ ಅವರ ಗಮನವನ್ನು ಸಧೃಡ ಆರೋಗ್ಯದ ಕಡೆಗೆ ಸೆಳೆಯುವ ಉದ್ದೇಶ ಈ ವಿನೂತನ ಕಾರ್ಯಕ್ರಮದ್ದಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಬಾಡಿ ಬಿಲ್ಡರ್ ರವಿ, ಸೈಯ್ಯದ್ ಸಲ್ಮಾನ್, ಸುರೇಶ್ ಚಂದ್ರ,ಆಕಾಶ್ ದೀಪ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: