ಪ್ರಮುಖ ಸುದ್ದಿ

ಸಚಿವ ಸುರೇಶ್ ಅಂಗಡಿ ನಿಧನ ಹಿನ್ನೆಲೆ : ಇಂದು ರಾಜ್ಯಾದ್ಯಂತ ಶೋಕಾಚರಣೆ

ರಾಜ್ಯ(ಬೆಂಗಳೂರು)ಸೆ.24:- ಕೊರೋನಾದಿಂದ ಬುಧವಾರ ಸಂಜೆ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನರಾಗಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ 4 ಬಾರಿ ಸಂಸದರಾಗಿದ್ದ ಸುರೇಶ್ ಅಂಗಡಿ ಕೇಂದ್ರ ಸರ್ಕಾರದಲ್ಲಿ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಅವರ ನಿಧನದ ಹಿನ್ನೆಲೆಯಲ್ಲಿ ಇಂದು ಕರ್ನಾಟಕದಲ್ಲಿ ಶೋಕಾಚರಣೆ ನಡೆಸಲು ನಿರ್ಧರಿಸಲಾಗಿದೆ. ಇಂದು ರಾಜ್ಯಾದ್ಯಂತ ಶೋಕಾಚರಣೆ ಆಚರಿಸುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯಪಾಲರ ಆದೇಶದಂತೆ ಈ ಅಧಿಸೂಚನೆ ಹೊರಡಿಸಲಾಗಿದೆ. ಈ ಅಧಿಸೂಚನೆ ಪ್ರಕಾರ, ರಾಜ್ಯದಲ್ಲಿ ಇಂದು ಯಾವುದೇ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ರಾಷ್ಟ್ರಧ್ವಜವನ್ನು ಸರ್ಕಾರದ ಎಲ್ಲ ಕಟ್ಟಡಗಳಲ್ಲಿ ಅರ್ಧ ಮಟ್ಟದಲ್ಲಿ ಹಾರಿಸಲು ಸೂಚನೆ ನೀಡಲಾಗಿದೆ. ಶೋಕಾಚರಣೆ ಮೂಲಕ ಸಚಿವ ಸುರೇಶ್ ಅಂಗಡಿ ಅವರಿಗೆ ಸರ್ಕಾರ ಗೌರವ ಸೂಚಿಸಲಿದೆ. (ಕೆ.ಎಸ್,ಎಸ್.ಎಚ್)

ಇದನ್ನೂ ಓದಿ
ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

ಸಚಿವ ಸುರೇಶ್ ಅಂಗಡಿಯವರ ನಿಧನಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಸಂತಾಪ

Leave a Reply

comments

Related Articles

error: