ಪ್ರಮುಖ ಸುದ್ದಿಮನರಂಜನೆ

ಎನ್ ಸಿಬಿ ಕಛೇರಿ ತಲುಪಿದ ಡಿಸೈನರ್ ಸಿಮೋನ್ : ನಟಿ ರಕುಲ್ ಪ್ರೀತ್ ಗೆ ಸಮನ್ಸ್ ಬಂದಿಲ್ಲವಂತೆ !

ದೇಶ(ಮುಂಬೈ)ಸೆ.24:- ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಮತ್ತು ಡಿಸೈನರ್ ಸಿಮೋನ್ ಖಂಬಾಟಾ ಸೇರಿದಂತೆ ಏಳು ಮಂದಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ವಿಚಾರಣೆಗೆ ಕರೆದಿದೆ.
ಇಂದಿನಿಂದ, ಪ್ರತಿಯೊಬ್ಬರೂ ಹೇಳಿಕೆಯನ್ನು ದಾಖಲಿಸಲು ಹಾಜರಾಗಬೇಕೆಂದು ಹೇಳಿದೆ. ಈ ನಟಿಯರ ಹೇಳಿಕೆಗಳನ್ನು ಮುಂದಿನ ಮೂರು ದಿನಗಳಲ್ಲಿ ದಾಖಲಿಸಲಾಗುವುದು. ಈ ಪ್ರಕರಣದಲ್ಲಿ ಹೇಳಿಕೆಯನ್ನು ದಾಖಲಿಸಲು ಡಿಸೈನರ್ ಸಿಮೋನ್ ಬೆಳಿಗ್ಗೆ 10 ಗಂಟೆಗೆ ಎನ್ಸಿಬಿ ಕಚೇರಿಯನ್ನು ತಲುಪಿದ್ದಾರೆ. ಆದರೆ, ರಕುಲ್ ಪ್ರೀತ್ ಸಿಂಗ್ ಅವರಿಗೆ ನೋಟಿಸ್ ಬಂದಿಲ್ಲ ಎಂದು ಹೇಳಲಾಗುತ್ತಿದೆ.
ರಕುಲ್ ಪ್ರೀತ್ ಸಿಂಗ್ ಮತ್ತು ಸಿಮೋನ್ ಖಂಬಾಟಾ ಅವರು ಇಂದು ಎನ್ಸಿಬಿ ಮುಂದೆ ಹಾಜರಾಗಬೇಕಿದೆ. ಈ ಹಿಂದೆ ರಕುಲ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಈಗ ಈ ವಿಷಯದಲ್ಲಿ ರಕುಲ್ ಅವರ ತೊಂದರೆಗಳು ಹೆಚ್ಚುತ್ತಿವೆ ಎನ್ನಲಾಗಿದೆ. ಇಂದು ಎನ್ಸಿಬಿ ರಕುಲ್ನನ್ನು ವಿಚಾರಣೆ ನಡೆಸಲಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: