ಪ್ರಮುಖ ಸುದ್ದಿ

ಒ.ಡಿ.ಪಿ ಸಂಸ್ಥೆಯಿಂದ ಸಣ್ಣ ರೈತರಿಗೆ ಉಚಿತವಾಗಿ ರಸಗೊಬ್ಬರ ವಿತರಣೆ

ರಾಜ್ಯ(ಚಾಮರಾಜನಗರ) ಸೆ. 24:- ಒ.ಡಿ.ಪಿ ಸಂಸ್ಥೆ ವತಿಯಿಂದ ಉಚಿತವಾಗಿ ರೈತರಿಗೆ ರಸಗೊಬ್ಬರವನ್ನು ಮೈಸೂರು ಒ.ಡಿ.ಪಿ ಸಂಸ್ಥೆ ವಲಯ ಸಂಯೋಜಕರಾದ ಸಿದ್ದರಾಜು ಅವರು ವಿತರಣೆ ಮಾಡಿದರು.
ತಾಲೂಕಿನ ಕಾಡಳ್ಳಿ, ಕೆಲ್ಲಂಬಳ್ಳಿ, ಕನ್ನೇಗಾಲ, ಸಿಂಗನಪುರ 4 ಗ್ರಾಮಗಳ ಮಹಿಳಾ ಸಂಘದ ಸದಸ್ಯರಾಗಿರುವ 106ಸದಸ್ಯರಿಗೆ ಉಚಿತವಾಗಿ ರಸಗೊಬ್ಬರವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಒ.ಡಿ.ಪಿ ಸಂಸ್ಥೆ ವಲಯ ಸಂಯೋಜಕರಾದ ಸಿದ್ದರಾಜು ಅವರು ಕೋವಿಡ್-19 ಇರುವ ಕಾರಣ ಸಣ್ಣ ರೈತರಿಗೆ ತೊಂದರೆಯಾಗಿ. ರೈತನು ದೇಶದ ಬೆನ್ನೆಲುಬು, ರೈತರನ್ನು ಆರ್ಥಿಕವಾಗಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರು 2015ರಲ್ಲಿ ದೇಶದಾದ್ಯಂತ 2000 ರೈತರ ಉತ್ಪಾದಕರ ಕಂಪನಿ ಸ್ಥಾಪಿಸುವ ಕಾರ್ಯಕ್ರಮವನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಒ.ಡಿ.ಪಿ ಸಂಸ್ಥೆಯು ನಬಾರ್ಡ್ ಸಹಯೋಗದೊಂದಿಗೆ 3 ಜಿಲ್ಲೆಗಳಲ್ಲಿ ರೈತ ಉತ್ಪಾದಕ ಕಂಪನಿ ಸ್ಥಾಪಿಸಿ ರೈತರಿಗೆ ಅನಿಕೂಲವಾಗುವ ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಅಗತ್ಯ ಪರಿಕರಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಗ್ರಾಮೀಣಪ್ರದೇಶದ ರೈತರು ಯಾವುದೇ ಬೆಳೆ ಬೆಳೆಯಲು ಉತ್ಪಾದಕರ ಕಂಪನಿನಿಗಳಿಂದ ನೇರವಾಗಿ ರೈತರಿಗೆ ತಲುಪುವ ವ್ಯವಸ್ಥೆ ಜಾರಿಯಾಗಬೇಕು ಆಗ ಮಾತ್ರ ರೈತರ ಪರಿಶ್ರಮಕ್ಕೆ ಬೆಲೆ ಸಿಗುತ್ತದೆ. ರೈತ ಉತ್ಪಾದಕ ಸಮಿತಿ ಸದಸ್ಯತ್ವಹೊಂದಿರುವ ಗ್ರಾಮೀಣ ಪ್ರದೇಶದ ರೈತರು ಕೊರೋನಾ ವಿರುದ್ಧ ಹೋರಾಟ ನಡೆಸುವ ಜೊತೆಗೆ ಸೋಂಕು ಹರಡದಂತೆ ಪ್ರತಿಯೊಬ್ಬರೂ ಸಹ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಒ.ಡಿ,ಪಿ ಸಂಸ್ಥೆಯಿಂದ ದೊರೆಯುವ ಸವಲತ್ತುಗಳನ್ನು ಪಡೆದು ಉತ್ತಮ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಅಭಿವೃದ್ದಿ ಹೊಂದುವ ಮೂಲಕ ಆರೋಗ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು. ಒ.ಡಿ.ಪಿ ಸಂಸ್ಥೆಯ ಸದಸ್ಯರು ಗ್ರಾಮಗಳಿಗೆ ತೆರಳಿ ರಸ ಗೊಬ್ಬರವನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಒ.ಪಿ.ಡಿ ಸಂಸ್ಥೆಯ ಕಾರ್ಯಕರ್ತರಾದ ರೇಖಾಮಣಿ, ಪುಷ್ಪಲತಾ ಹಾಗೂ ಸಂಸ್ಥೆಯ ಸದಸ್ಯರು ಮತ್ತು ಮಹಿಳಾ ಸಂಘದ ಸದಸ್ಯರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: