ಮೈಸೂರು

ಮೈಸೂರಿನ ಬೋಗಾದಿ ಜಂಕ್ಷನ್ ರಸ್ತೆಯಲ್ಲಿ ಕಸದ ರಾಶಿ


ಮೈಸೂರು,ಸೆ.24:-ಮೈಸೂರಿನ ಬೋಗಾದಿ ಜಂಕ್ಷನ್ ರಸ್ತೆಯಲ್ಲಿ ತಿಪ್ಪೆಯಂತೆ ಕಸದವನ್ನು ಬಿಸಾಡುತ್ತಿರುವುದು ಕಂಡು ಬಂದಿದ್ದು, ಅಸಹ್ಯ ಮೂಡಿಸುತ್ತಿದೆ.
ರಾಶಿ ರಾಶಿ ಪ್ಲಾಸ್ಟಿಕ್ ಕವರ್ ಗಳನ್ನೇ ತಂದು ಸುರಿದಿದ್ದು, ಅಲ್ಲಿ ಹಸುಗಳು ಪ್ಲಾಸ್ಟಿಕ್ ಕವರ್ ಗಳನ್ನೇ ತಿನ್ನಬಹುದೆಂಬ ಆತಂಕ ಸ್ಥಳೀಯರಲ್ಲಿ ಉಂಟಾಗಿದೆ. ದ್ವಿಚಕ್ರವಾಹನ ಸವಾರರು ಕೂಡ ಕಸವನ್ನು ಬಿಸಾಡಿ ಹೋಗುತ್ತಿರುವುದು ಕಂಡು ಬಂದಿದ್ದು, ಕಸವನ್ನು ತೆಗೆಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಪ್ಲಾಸ್ಟಿಕ್ ಕವರಗಳು ಗಾಳಿಗೆ ಹಾರಾಡುತ್ತ ಎಲ್ಲೆಂದರಲ್ಲಿ ಹೋಗಿ ಬೀಳುತ್ತಿವೆ. ಹರಿದ ಹಳೆಯ ಬಟ್ಟೆಗಳನ್ನು ಕೂಡ ಇಲ್ಲಿಯೇ ಬಿಸಾಡಲಾಗುತ್ತಿದೆ. ರಾಶಿ ರಾಶಿ ಕಸವೇ ಇಲ್ಲಿ ಬಿದ್ದಿದ್ದರೂ ಕಸ ಹಾಕಬೇಡಿ ಎನ್ನುವ ನಾಮಫಲಕವನ್ನಾಗಲಿ, ಕಸ ತೆಗೆದು ಸ್ವಚ್ಛಗೊಳಿಸುವ ಕಾರ್ಯಕ್ಕಾಗಲಿ ಸಂಬಂಧಪಟ್ಟವರು ಪ್ರಯತ್ನಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್,.ಎಚ್)

Leave a Reply

comments

Related Articles

error: